
ಬೀಳಗಿ: ಜನಿಸಿದ ಮಗುವಿನಿಂದ ಐದು ವರ್ಷಗಳ ವಯೋಮಾನದ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೊಲಿಯೋ ಹನಿ ಹಾಕಿಸಿ ಜೀವನಪರ್ಯಂತ ಮಾರಕ ರೋಗಗಳಿಂದ ರಕ್ಷಿಸಬೇಕೆಂದು ಜಾಗೃತಿ ಮೂಡಿಸಬೇಕು ಎಂದು ತಹಶೀಲ್ದಾರ್ ವಿನೋದ ಹತ್ತಳ್ಳಿ ಹೇಳಿದರು.
ಸ್ಥಳೀಯ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಪೊಲಿಯೋ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ತಾಯಿ ತನ್ನ ಮಗುವಿಗೆ ಪಲ್ಸ್ ಪೊಲಿಯೋ ಹನಿ ಹಾಕಿಸುವಲ್ಲಿ ವಿಫಲವಾದರೆ ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜೀವಿತಾವಧಿಯುದ್ದಕ್ಕೂ ಪೊಲಿಯೋ ರೋಗದ ವಿರುದ್ಧ ರಕ್ಷಣೆ ಪಡೆಯಲು ಪಲ್ಸ್ ಪೊಲಿಯೋ ಹನಿ ಹಾಕಿಸುವುದು ಕಡ್ಡಾಯ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಅನಿಲ ಬದ್ನೂರ ಮಾತನಾಡಿ, ಡಿ.21ರಂದು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಶಾಸಕ ಜೆ.ಟಿ.ಪಾಟೀಲ ಅವರು ಪಲ್ಸ್ ಪೊಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದು ತಿಳಿಸಿದರು.
ಮುಖ್ಯವೈದ್ಯಾಧಿಕಾರಿ ಎಸ್.ಟಿ. ತೇಲಿ ಮಾತನಾಡಿ, ಬೂತ್ ಗಳಲ್ಲಿ ಡಿ.21ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 8 ಗಂಟೆವರೆಗೆ ಪೊಲೀಯೊ ಲಸಿಕೆ ಹಾಕಲಾಗುತ್ತದೆ. ಡಿ.22ರಿಂದ 24ರ ವರೆಗೆ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಾಗುತ್ತದೆ ಎಂದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದೇವೀಂದ್ರ ಧನಪಾಲ, ಕೆಇಬಿ ಎಇಇ ಮಂಜುನಾಥ ಬೋಕಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಎಸ್. ಗಡ್ದೇವರಮಠ, ಸಿಡಿಪಿಒ ಬಿ.ಜಿ. ಕವಟೇಕರ, ಶಿಕ್ಷಣ ಇಲಾಖೆಯ ಎಸ್.ಎ.ಎತ್ತಿನಮನಿ, ಬಸವರಾಜ ರಾಠೋಡ, ಆರೋಗ್ಯ ಇಲಾಖೆಯ ಪ್ರಕಾಶ ಯಲಗೋಡ, ಶಿವು ಗೋಕಾವಿ, ಮೇಘಾ ಬೂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.