ADVERTISEMENT

ಕಾಯಕದಲ್ಲಿ ದೇವರ ಕಾಣಿರಿ: ಪ್ರೊ.ಸಿದ್ದಲಿಂಗಪ್ಪ ಬರಗುಂಡಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 4:10 IST
Last Updated 21 ಡಿಸೆಂಬರ್ 2025, 4:10 IST
ಗುಳೇದಗುಡ್ಡದ ಗುಗ್ಗರಿಪೇಟಿಯ ಪುತ್ರಪ್ಪ ಬೀಳಗಿಯವರ ಮನೆಯಲ್ಲಿ ಶನಿವಾರ ಜರುಗಿದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಪ್ರೊ.ಸಿದ್ದಲಿಂಗಪ್ಪ ಬರಗುಂಡಿ ಮಾತನಾಡಿದರು
ಗುಳೇದಗುಡ್ಡದ ಗುಗ್ಗರಿಪೇಟಿಯ ಪುತ್ರಪ್ಪ ಬೀಳಗಿಯವರ ಮನೆಯಲ್ಲಿ ಶನಿವಾರ ಜರುಗಿದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಪ್ರೊ.ಸಿದ್ದಲಿಂಗಪ್ಪ ಬರಗುಂಡಿ ಮಾತನಾಡಿದರು   

ಗುಳೇದಗುಡ್ಡ: ಕಾಯಕವನ್ನು ಪ್ರಾಮಾಣಿಕವಾಗಿ ಮಾಡಿ ದೇವರನ್ನು ಕಾಣಬೇಕು. ಎಲ್ಲರೂ ನಡೆನುಡಿ ಚೆನ್ನಾಗಿರಬೇಕು, ಅಹಂಕಾರ ಬಿಡಬೇಕು, ಸದ್ಗುಣಗಳು ನಮ್ಮ ಗುಣವಾಗಬೇಕು ಅಂದಾಗ ಸತ್ಯದ ಅರಿವಾಗುತ್ತದೆ ಎಂದು ಪ್ರೊ.ಸಿದ್ದಲಿಂಗಪ್ಪ ಬರಗುಂಡಿ ಹೇಳಿದರು.

ಪಟ್ಟಣದ ಗುಗ್ಗರಿಪೇಟಿಯ ಪುತ್ರಪ್ಪ ಬೀಳಗಿಯವರ ಮನೆಯಲ್ಲಿ ಶನಿವಾರ ಜರುಗಿದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೊಸ ಧರ್ಮ, ಹೊಸ ಆಲೋಚನೆ ಹುಟ್ಟು ಹಾಕಿದವರು ಬಸವಣ್ಣನವರು, ಇಷ್ಟಲಿಂಗ ಬದುಕಿನ ಭಾಗವಾಗಬೇಕು. ಇಷ್ಟಲಿಂಗ ಚೈತನ್ಯಶೀಲತೆಯಿಂದ ಇರಬೇಕು. ಅಂದಾಗ ಆತ್ಮದ ಅರಿವು ನಮಗಾಗುತ್ತದೆ. ಎಲ್ಲ ಶರಣರು ಸಮಾನತಾ ಆದರ್ಶ ಸಮಾಜ ಕಟ್ಟಿದ್ದಾರೆ. ಅವರ ಆದರ್ಶಗಳನ್ನು ನಾವು ಪಾಲಿಸಬೇಕು ಎಂದು ಹೇಳಿದರು.

ADVERTISEMENT

ಉಪನ್ಯಾಸಕ ಶ್ರೀಕಾಂತ ಗಡೆದ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಂತೇಶ ಸಿಂದಗಿ, ಸುರೇಶ ರಾಜನಾಳ, ವಸಂತ ಚಹ್ವಾಣ, ಲಿಂಗಾಯತ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ರಾಚಣ್ಣ ಕೆರೂರು, ಉಪಾಧ್ಯಕ್ಷ ಮೋಹನ ಕರನಂದಿ, ಜಯಶ್ರೀ ಬರಗುಂಡಿ, ಶ್ರೀದೇವಿ ಶೇಖಾ, ವಿಶಾಲಾಕ್ಷಿ ಗಾಳಿ, ಸುರೇಖಾ ಗೆದ್ದಲಮನಿ, ಸುಹಾಸಿನಿ ಬೀಳಗಿ, ಬಸವರಾಜ ಕಂಬಾಳಿಮಠ, ಮಹಾಲಿಂಗಪ್ಪ ಕರನಂದಿ, ಮುರುಗೇಶ ಶೇಖಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.