ಬೇಲೂರ (ಬಾದಾಮಿ): ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶೇ 68.9 ರಷ್ಟು ಉತ್ತೀರ್ಣರಾಗಿದ್ದಾರೆ ಎಂದು ಪ್ರಾಚಾರ್ಯ ಎಂ.ಎನ್. ನಿಲುಗಲ್ ತಿಳಿಸಿದ್ದಾರೆ.
ಕಲಾ ವಿಭಾಗದಲ್ಲಿ ಅರುಂಧತಿ ಕಬ್ಬರಗಿ ಶೇ 96.83ರಷ್ಟು ಅಂಕ ಪಡೆದಿದ್ದು, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಅಶ್ವಿನಿ ಮಾಧವನವರ ಶೇ 93.5, ಸುಚಿತ್ರಾ ಕರಬಂಧ ಶೇ 92.66, ಸಂಜನಾ ಮೆಣಸಗಿ ಶೇ 91.66 ಅಂಕ ಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸ್ವಾತಿ ವಾಲಿಕಾರ ಶೇ 93.33, ಜ್ಯೋತಿ ಬದಾಮಿ ಶೇ 91, ಪೂಜಾ ಕೂಗಲ ಶೇ 90 ಅಂಕ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.