ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಬಾಗಲಕೋಟೆಯ ಕೃಷ್ಣಪ್ಪ ಮರಡಿಮನಿ

ಕೋವಿಡ್ ಸೋಂಕಿನಿಂದ ಮೃತಪಟ್ಟ ನೂರಾರು ಮಂದಿಯ ಅಂತ್ಯಕ್ರಿಯೆ ಮಾಡಿರುವ ಕೃಷ್ಣಪ್ಪ ಮರಡಿಮನಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:31 IST
Last Updated 31 ಡಿಸೆಂಬರ್ 2020, 19:31 IST
ಕೃಷ್ಣಪ್ಪ ಮರಡಿಮನಿ
ಕೃಷ್ಣಪ್ಪ ಮರಡಿಮನಿ   

ಪ್ರತಿ ಮೃತ ದೇಹ ಗುಣಿಯಲ್ಲಿ (ತೆಗ್ಗು) ಹಾಕುವ ಮುನ್ನ ಊದುಕಡ್ಡಿ ಬೆಳಗಿ, ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ. ಕಿರಿಯರಿಗೆ ಹಿರಿಯನಾಗಿ, ಹಿರಿಯ ಜೀವಗಳಿಗೆ ಮನೆಯ ಮಗನಾಗಿ ಮಣ್ಣು ಹಾಕುತ್ತೇನೆ..

ಆಂಬುಲೆನ್ಸ್ ಚಾಲಕ ಆಗಿರುವ ನಾನು, ಜಿಲ್ಲೆಯಲ್ಲಿ ಕೋವಿಡ್‌ಗೆ ಮೊದಲು ಬಲಿಯಾದ 78 ವರ್ಷದ ವೃದ್ಧರಿಂದ ಮೊದಲುಗೊಂಡ ಇಲ್ಲಿಯವರೆಗೆ ನೂರಾರು ಮಂದಿಯ ಅಂತ್ಯಕ್ರಿಯೆ ಮುಂದೆ ನಿಂತು ಮಾಡಿದ್ದೇನೆ.

ಮೊದಲಿಗೆ ಭಯ, ಮನಸ್ಸಿಗೆ ಬೇಸರವಾಗುತ್ತಿತ್ತು. ಈಗ ಇಲ್ಲ. ಸಾವಿಗೆ ಮಾತ್ರ ಬಡವ–ಶ್ರೀಮಂತ, ಜಾತಿಯ ಭೇದವಿಲ್ಲ. ದೇವರು ದೊಡ್ಡವನು. ಯಾವ ಜನ್ಮದ ಋಣವೋ ಎಲ್ಲ ಜಾತಿಯವರಿಗೂ ಮಣ್ಣು ಮಾಡುವ ಪುಣ್ಯದ ಕೆಲಸ ನನಗೆ ವಹಿಸಿದ್ದಾನೆ ಎಂದು ನಂಬಿ ಕೆಲಸ ಮಾಡುತ್ತಿದ್ದೇನೆ.

ADVERTISEMENT

ಇದೊಂದು ವಿಚಿತ್ರ ಸನ್ನಿವೇಶ. ಕೋವಿಡ್‌ಗೆ ತುತ್ತಾಗಿ ನ್ಯಾಯಾಧೀಶರೊಬ್ಬರ ತಾಯಿ ಸಾವಿಗೀಡಾದರು. ಅವರು ಆಂಬುಲೆನ್ಸ್‌ ಬಳಿ ನಿಂತು ಕೊನೆಯ ಬಾರಿಗೆ ತಾಯಿಯ ಮುಖ ನೋಡಿ ಅಲ್ಲಿಯೇ ನಿಂತು ಅತ್ತು ಹೋದರು.

ಕೃಷ್ಣಪ್ಪ ಮರಡಿಮನಿ

‘ನಿಮಗೂ ವಯಸ್ಸಾಗಿದೆ. ಈ ಕೆಲಸ ಆಗೊಲ್ಲ ಎಂದು ಬರೆದುಕೊಟ್ಟು ಬಿಟ್ಟುಬಿಡಿ’ ಎಂದು ಪತ್ನಿ, ಮಕ್ಕಳು ಹಲವು ಬಾರಿ ಒತ್ತಾಯಿಸಿದ್ದಾರೆ. ಮನಸ್ಸು ಒಪ್ಪೊಲ್ಲ, ಹಾಗೆ ಬಿಡೋಕೆ ಬರೊಲ್ಲ.

–ಕೃಷ್ಣಪ್ಪ ಮರಡಿಮನಿ, ಅಂತ್ಯಕ್ರಿಯೆ ನೆರವೇರಿಸುವ ತಂಡದ ಪ್ರಮುಖ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.