ADVERTISEMENT

ಕೃಷಿ ಅಭಿವೃದ್ಧಿಗೆ ಶಿವಸೇನೆ ಆದ್ಯತೆ: ಸಿದ್ಧಲಿಂಗ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 4:14 IST
Last Updated 24 ನವೆಂಬರ್ 2025, 4:14 IST
ಮಹಾಲಿಂಗಪುರದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಶಿವಸೇನೆ ಪಕ್ಷದಿಂದ ಭಾನುವಾರ ಹಮ್ಮಿಕೊಂಡಿದ್ದ ಬಾಗಲಕೋಟೆ ಜಿಲ್ಲಾ ಪರಿವರ್ತನಾ ಪರ್ವ ಕಾರ್ಯಕ್ರಮದಲ್ಲಿ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು
ಮಹಾಲಿಂಗಪುರದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಶಿವಸೇನೆ ಪಕ್ಷದಿಂದ ಭಾನುವಾರ ಹಮ್ಮಿಕೊಂಡಿದ್ದ ಬಾಗಲಕೋಟೆ ಜಿಲ್ಲಾ ಪರಿವರ್ತನಾ ಪರ್ವ ಕಾರ್ಯಕ್ರಮದಲ್ಲಿ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು   

ಮಹಾಲಿಂಗಪುರ: ‘ಹಿಂದೂ ವಿರೋಧಿ ಕಾಂಗ್ರೆಸ್‍ಗೆ ಮತ ಹಾಕಿ ಆ ಪಕ್ಷದವರನ್ನು ದೊಡ್ಡ ಸ್ಥಾನದಲ್ಲಿ ಕೂರಿಸಿ ಅವರಿಗೆ ಲೂಟಿ ಮಾಡಲು ಅವಕಾಶ ನೀಡುತ್ತಿದ್ದೇವೆ’ ಎಂದು ಶಿವಸೇನಾ ರಾಜ್ಯ ಘಟಕದ ಅಧ್ಯಕ್ಷ ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಆರೋಪಿಸಿದರು.

ಪಟ್ಟಣದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಶಿವಸೇನೆ ಪಕ್ಷದಿಂದ ಭಾನುವಾರ ಹಮ್ಮಿಕೊಂಡ ಬಾಗಲಕೋಟೆ ಜಿಲ್ಲಾ ಪರಿವರ್ತನಾ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಹಿಂದುತ್ವವನ್ನು ಗುರಾಣಿಯಾಗಿ ಹಿಡಿದು ಅಧಿಕಾರ ಪಡೆಯಲು ಕರ್ನಾಟಕದಲ್ಲಿ ಶಿವಸೇನೆ ಪಕ್ಷವನ್ನು ತಂದಿಲ್ಲ. ಶಿವಸೇನೆಯ ಅಧ್ಯಕ್ಷ ಏಕನಾಥ ಸಿಂಧೆ ಅವರು ಕೃಷಿ ಅಭಿವೃದ್ಧಿಗೆ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿರುವಂತೆ ಕರ್ನಾಟಕದ ಶಿವಸೇನೆ ಕಾರ್ಯ ಪ್ರವೃತ್ತವಾಗಲಿದೆ’ ಎಂದರು.

ADVERTISEMENT

‘ಹಿಂದೂಗಳ ಮತ ಪಡೆದ ರಾಜಕಾರಣಿಗಳು ಅವರು ಸಂಕಷ್ಟದಲ್ಲಿದ್ದಾಗ ಅವರ ಸಹಾಯಕ್ಕೆ ಬರಲಿಲ್ಲ. ವಂಶಪಾರಂಪರಿಕ ಆಡಳಿತ ಕರ್ನಾಟಕದಲ್ಲಿ ನಡೆಯುತ್ತಿದೆ. ಮತ ಹಾಕಿರುವ ಕಾರ್ಯಕರ್ತರು ಕೇಸ್ ಹಾಕಿಕೊಂಡು ಜೈಲ್‍ಗೆ ಹೋಗುತ್ತಿದ್ದಾರೆ. ಆದರೆ, ಮತ ಪಡೆದ ಶಾಸಕರು, ಅವರ ಮಕ್ಕಳು ವಿಧಾನಸಭೆ ಪ್ರವೇಶ ಮಾಡುತ್ತಿದ್ದಾರೆ’ ಎಂದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಾಲಿಂಗಪ್ಪ ಗುಂಜಿಗಾಂವಿ ಮಾತನಾಡಿದರು. ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಕ್ಷದ ಗಂಗಾಧರ ಕುಲಕರ್ಣಿ, ಎಸ್.ಭಾಸ್ಕರನ್, ಅಮರನಾಥ, ಎಂ.ಎಸ್.ಹರೀಶ, ನಾಗರಾಜ ಭಜಂತ್ರಿ, ಅನೀಲ ಕಿರಿಕಿರಿ, ಪ್ರಹ್ಲಾದ ನೂಲಿ, ರಾಜು ಪರಮಾನಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.