ADVERTISEMENT

‘ಹಿರಿಯರು ಸಮಾಜಕ್ಕೆ ಮಾರ್ಗದರ್ಶನ ಮಾಡಿ’: ಸಂಗಮೇಶ ನಿರಾಣಿ ಸಲಹೆ

ಸರ್ಕಾರಿ ನಿವೃತ್ತ ನೌಕರರ ಸಂಘದ ಸಭೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 4:08 IST
Last Updated 20 ಜುಲೈ 2025, 4:08 IST
ಜಮಖಂಡಿಯ ಬಸವ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯರನ್ನು ಸನ್ಮಾನಿಸಲಾಯಿತು
ಜಮಖಂಡಿಯ ಬಸವ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯರನ್ನು ಸನ್ಮಾನಿಸಲಾಯಿತು   

ಜಮಖಂಡಿ: ‘ನಿವೃತ್ತ ನೌಕರರು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು’ ಎಂದು ಎಂ.ಆರ್‌.ಎನ್. ಉದ್ಯಮ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಹೇಳಿದರು.

ನಗರದ ಬಸವ ಭವನದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ 38ನೇ ವಾರ್ಷಿಕ ಸಭೆ ಹಾಗೂ 70 ವರ್ಷ ಮಲ್ಪಟ್ಟವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಹಿರಿಯರು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಮನೆಯಲ್ಲಿನ ಚಿಕ್ಕವರಿಗೆ ಉತ್ತಮ ಸಂಸ್ಕಾರ ಕಲಿಸಬೇಕು’ ಎಂದರು.

ADVERTISEMENT

ಓಲೇಮಠದ ಆನಂದ ದೇವರು ಮಾತನಾಡಿ, ‘ಇಂದಿನ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವುದು ಅವಶ್ಯವಾಗಿದೆ. ಕಷ್ಟ ಎದುರಿಸುವುದನ್ನು ಕಲಿಸಬೇಕಿದೆ’ ಎಂದು ತಿಳಿಸಿದರು.

ಬಸವ ಸಮಿತಿ ಅಧ್ಯಕ್ಷ ಕಾಡು ಮಾಳಿ, ಎಚ್.ವೈ. ಜರಾಳೆ, ಪಿ.ಬಿ. ಅಜ್ಜನವರ ಮಾತನಾಡಿದರು. ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಂ. ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು.

70 ವರ್ಷ ಮೇಲ್ಪಟ್ಟ 20ಕ್ಕೂ ಹೆಚ್ಚು ಹಿರಿಯರನ್ನು ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ನಿವೃತ್ತ ಡಿವೈಎಸ್‌ಪಿ ಪಿ.ಎನ್. ಪಾಟೀಲ, ಸಿ.ಪಿ. ಜನವಾಡ, ವಿ.ಬಿ. ಗೋವಿಂದಪ್ಪನವರ, ಯು.ಕೆ. ಗಸ್ತಿ, ಕೆ.ಜಿ. ಘಂಟಿ, ಸಂಗಮೇಶ ಗಾಣಿಗೇರ, ಎಸ್.ಆರ್. ಪಾಟೀಲ, ಎಂ.ಡಿ. ಸಂಖ, ಸಿ.ಪಿ. ಮೇಗಾಡಿ ಇದ್ದರು.

‘ಸಂಸ್ಕಾರಯುತ ಪದ್ಧತಿ ಪಾಲಿಸಿ’:

‘ಮನೆಯಲ್ಲಿ ಹಿರಿಯರು ಸಂಸ್ಕಾರಯುತ ಜೀವನ ಪದ್ಧತಿ ಪಾಲಿಸಬೇಕು. ಅದನ್ನೇ ಚಿಕ್ಕವರೂ ಅನುಸರಿಸುತ್ತಾರೆ. ಇದರಿಂದ ಮುಂದಿನ ಪೀಳಿಗೆಗೆ ಸಂಸ್ಕಾರದ ಮಾರ್ಗ ತೋರಿದಂತಾಗುತ್ತದೆ. ಯುವಕರು ಹಾದಿ ತಪ್ಪಿದರೆ ಮಾರ್ಗದರ್ಶನ ಮಾಡುವ ಜವಾಬ್ದಾರಿ ಹಿರಿಯರದ್ದಾಗಿದೆ’ ಎಂದು ಸಂಘದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಪಿ. ಬಿರಾದಾರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.