ADVERTISEMENT

ಮತ್ತೆ ಸಿಎಂ ಆದರೆ 10 ಕೆ.ಜಿ ಅಕ್ಕಿ ಕೊಡುವೆ: ಸಿದ್ದರಾಮಯ್ಯ

ಬಾದಾಮಿ ತಾಲ್ಲೂಕಿನ ಕಾತರಕಿಯಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 13:02 IST
Last Updated 20 ಅಕ್ಟೋಬರ್ 2020, 13:02 IST
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಸಿದ್ದರಾಮಯ್ಯ (ಸಂಗ್ರಹ ಚಿತ್ರ)   

ಬಾಗಲಕೋಟೆ:'ಮತ್ತೆನಮ್ಮ ಸರ್ಕಾರಬಂದು, ನಾನು ಸಿಎಂ ಆದರೆ ನಿಮಗೆ 10 ಕೆ.ಜಿ ಅಕ್ಕಿ ಕೊಡುವೆ‘ ಎಂದು ವಿಧಾನಸಭೆ ವಿರೋಧ‍ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬಾದಾಮಿ ತಾಲ್ಲೂಕಿನ ಕಾತರಕಿ ಗ್ರಾಮದಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಈಗಲೂ ಎಲ್ಲರಿಗೂ ಅಕ್ಕಿ ಕೊಡ್ತಿದಾರಾ ಎಂದು ಪ್ರಶ್ನಿಸಿದರು. ಕಡಿಮೆ ಮಾಡಿದ್ದಾರೆ ಎಂಬ ಉತ್ತರ ಬರುತ್ತಿದ್ದಂತೆಯೇ ಅದೇಕೆ 3 ಕೆ.ಜಿ ಹೆಚ್ಚಾಗುತ್ತೇ ಅಂತ ಕಡಿಮೆ ಮಾಡಿದ್ರಾ ಎಂದು ಪ್ರಶ್ನಿಸಿದರು.

ಜನರು ಯಾರೂ ಹಸಿವಿನಿಂದ ಮಲಗಬಾರದು, ಹೊಟ್ಟೆ ತುಂಬ ಊಟ ಮಾಡಬೇಕು. ಬರಗಾಲ, ಪ್ರವಾಹ ಬಂದ್ರೆ ಏನೇ ಇದ್ರೂ ಹೊಟ್ಟೆ ತುಂಬ ಊಟ ಇದ್ರೆ ಜನ ನೆಮ್ಮದಿಯಾಗಿ ಇತಾ೯ರೆ. ಇದೊಂದು ದುಡ್ಡಿಲ್ಲದ ದರಿದ್ರ ಸಕಾ೯ರ. ಸಂಬಳ ಕೊಡೋಕೆ ಸಕಾ೯ರದ ಬಳಿ ದುಡ್ಡಿಲ್ಲ. ನಾನು ಸಿಎಂ ಆಗಿದ್ದಾಗ ಖಜಾನೆ ಯಾವಾಗಲೂ ಭತಿ೯ ಆಗಿರುತ್ತಿತ್ತು..ಈಗ ದುಡ್ಡೇ ಇಲ್ಲ ಅಂತಿದ್ದಾರೆ. ಯಡಿಯೂರಪ್ಪ ಸಿಎಂ ಆದಮೇಲೆ ಒಂದು ಪೈಸೇನೂ ಇಲ್ಲ ಎಂದು ವ್ಯಂಗ್ಯವಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.