ADVERTISEMENT

ಸಿದ್ಧಾರೂಢರ ಜಲರಥೋತ್ಸವ ಸಂಪನ್ನ

ತೆಪ್ಪೋತ್ಸವಕ್ಕೆ ಸಾಕ್ಷಿಯಾದ ಅಪಾರ ಸಂಖ್ಯೆಯ ಭಕ್ತರು

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 2:53 IST
Last Updated 24 ಆಗಸ್ಟ್ 2021, 2:53 IST
ಮಹಾಲಿಂಗಪುರದಲ್ಲಿ ಸಿದ್ಧಾರೂಢರ ಪುಣ್ಯಾರಾಧನೆ ಅಂಗವಾಗಿ ಸಿದ್ಧಸರೋವರ ಕೆರೆಯಲ್ಲಿ ಜಲರಥೋತ್ಸವ ಜರುಗಿತು
ಮಹಾಲಿಂಗಪುರದಲ್ಲಿ ಸಿದ್ಧಾರೂಢರ ಪುಣ್ಯಾರಾಧನೆ ಅಂಗವಾಗಿ ಸಿದ್ಧಸರೋವರ ಕೆರೆಯಲ್ಲಿ ಜಲರಥೋತ್ಸವ ಜರುಗಿತು   

ಮಹಾಲಿಂಗಪುರ: ಸ್ಥಳೀಯ ಸಿದ್ಧಾರೂಢ ನಗರದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಸಿದ್ಧಾರೂಢರ ಪುಣ್ಯಾರಾಧನೆ ಅಂಗವಾಗಿ ಜಲರಥೋತ್ಸವ (ತೆಪ್ಪೋತ್ಸವ)ವು ಸೋಮವಾರ ಸಂಜೆ ಸಂಭ್ರಮದಿಂದ ಜರುಗಿತು.

ತೆಪ್ಪೋತ್ಸವದ ಅಂಗವಾಗಿ ಬೆಳಿಗ್ಗೆ ಸಿದ್ಧಾರೂಢರ ಮೂರ್ತಿಗೆ ಅಭಿಷೇಕ ನಡೆಯಿತು. ಅನ್ನಪೂರ್ಣೇಶ್ವರಿ ನೇಕಾರ ಮಹಿಳಾ ಸಂಘದವರಿಂದ ಮಹಿಳೆಯರಿಗೆ ಉಡಿ ತುಂಬಲಾಯಿತು. ನಂತರ ವಿವಿಧ ಗ್ರಾಮಗಳ ಭಜನಾ ಮೇಳದವರಿಂದ ಭಜನಾ ಕಾರ್ಯಕ್ರಮ ಜರುಗಿತು.

ತೆಪ್ಪೋತ್ಸವದ ಸಮಾರಂಭದ ಅಧ್ಯಕ್ಷತೆಯನ್ನು ಸಹಜಾನಂದ ಸ್ವಾಮೀಜಿ ವಹಿಸಿದ್ದರು. ಕೊಪ್ಪಳದ ಶಿವಪ್ರಕಾಶಾನಂದ ಸ್ವಾಮೀಜಿ, ನಿಂಗನೂರ ಶಿವಪುತ್ರಾವಧೂತ ಸ್ವಾಮೀಜಿ, ದುಪದಾಳ ಭೀಮಾನಂದ ಸ್ವಾಮೀಜಿ, ಇಬ್ರಾಹಿಂ ಸುತಾರ, ಕೋಲುರ ಮಲ್ಲಪ್ಪ ಪೂಜೇರಿ ಶರಣರು, ರನ್ನಬೆಳಗಲಿ ಸದಾಶಿವ ಗುರೂಜಿ, ಕಂಕನವಾಡಿ ಮಾರುತಿ ಶರಣರು, ಕಲಬುರ್ಗಿಯ ವಿದ್ಯಾವತಿತಾಯಿ, ಚಿಕ್ಕಪಡಸಲಗಿಯ ಅಕ್ಕಮಹಾದೇವಿತಾಯಿ, ವಿಜಯಪುರದ ಶಶಿಕಲಾತಾಯಿ ಭಾಗವಹಿಸಿದ್ದರು.

ADVERTISEMENT

ಸಂಜೆ 6 ಗಂಟೆಗೆ ಅಲಂಕೃತ ರಥದಲ್ಲಿ ಸಿದ್ಧಾರೂಢರ ಮೂರ್ತಿ ಇಟ್ಟು ಪೂಜೆ ಸಲ್ಲಿಸಿದ ಡಾ.ಬಿ.ಡಿ. ಸೋರಗಾಂವಿ ಅವರು ಜಲರಥೋತ್ಸವಕ್ಕೆ ಚಾಲನೆ ನೀಡಿದರು. ವಿಶಾಲವಾದ ಸಿದ್ಧಸರೋವರ ಕೆರೆಯಲ್ಲಿ ಒಂದು ಗಂಟೆಗಳ ಕಾಲ ಜರುಗಿದ ರಥೋತ್ಸವದಲ್ಲಿ ಅಪಾರ ಭಕ್ತರು ಸಿದ್ಧಾರೂಢ ಮಹಾರಾಜಕೀ ಜೈ, ಸಿದ್ದಾರೂಢರ ಜೋಳಗಿ-ಜಗತ್ತಿಗೆಲ್ಲ ಹೋಳಗಿ ಎಂಬ ಜಯಘೋಷಗಳು ಮೊಳಗಿಸಿದರು.

ಹುಬ್ಬಳ್ಳಿಯ ಸಿದ್ಧಾರೂಢರ ಮಠದಲ್ಲಿಯ ತೆಪ್ಪೋತ್ಸವದ ನಂತರ ಉತ್ತರ ಕರ್ನಾಟಕದಲ್ಲಿ ಜರಗುವ ಎರಡನೇ ದೊಡ್ಡ ತೆಪ್ಪೋತ್ಸವ ( ಜಲರಥೋತ್ಸವ) ಇದಾಗಿದೆ. ತೆಪ್ಪೋತ್ಸವ ವೀಕ್ಷಣೆಗಾಗಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ ಜಿಲ್ಲೆಗಳ ಭಕ್ತಾದಿಗಳು ಆಗಮಿಸಿದ್ದರು. ರಥೋತ್ಸವಕ್ಕೆ ನಿಂಬೆಹಣ್ಣು, ಉತ್ತತ್ತಿ, ಹೂ, ಬೆಂಡ, ಬೆತ್ತಾಸಗಳನ್ನು ಹಾರಿಸಿ, ಜಲರಥೋತ್ಸವ ವೀಕ್ಷಿಸಿದರು.

ಸಿದ್ದಾರೂಢ ಟ್ರಸ್ಟ್ ಕಮೀಟಿ ಉಪಾಧ್ಯಕ್ಷ ಡಾ.ಬಿ.ಡಿ.ಸೋರಗಾಂವಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮೋರೆ, ಖಜಾಂಜಿ ಅಲ್ಲಪ್ಪ ಗುಂಜಿಗಾಂವಿ, ಸಹಕಾರ್ಯದರ್ಶಿ ಗುರುಪಾದ ಅಂಬಿ, ಧರ್ಮದರ್ಶಿಗಳಾದ ಮಲ್ಲಪ್ಪ ಕಟಗಿ, ಚೇತನ ಹಾದಿಮನಿ, ಮಲ್ಲಪ್ಪ ಭಾಂವಿಕಟ್ಟಿ, ಲಕ್ಕಪ್ಪ ಚಮಕೇರಿ, ಗೋಲೇಶ ಅಮ್ಮಣಗಿ, ಮಲ್ಲಪ್ಪ ಕಟಗಿ, ಶ್ರೀಮಠದ ಸದ್ಭಕ್ತರಾದ ರವಿ ಜವಳಗಿ, ಅಶೋಕ ಬಾಣಕಾರ, ಜಿ.ಎಸ್.ಗೊಂಬಿ, ಸುಭಾಸ ನಾಯಕ, ಮಹೇಶ ಬಡಿಗೇರ, ಶಿವಾನಂದ ತೇಲಿ, ಕಲ್ಮೇಶ ಕುಂಬಾರ, ಹನಮಂತ ಹೂಗಾರ, ಮಲ್ಲಪ್ಪ ರಡ್ಡಿ, ಕುಮಾರ ಉಳ್ಳಾಗಡ್ಡಿ, ಸಿದ್ರಾಮಯ್ಯ ಗೋಠೆ, ಮಹಾಲಿಂಗ ಕರೆಹೊನ್ನ, ಸದಾಶಿವ ಇಂಗಳಗಿ, ಸುರೇಶ ಕೆಂಪವಾಡ, ಶಂಕರಗೌಡ ಪಾಟೀಲ, ಶ್ರೀಕಾಂತ ಮುಕರೆ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.