
ಬಾಗಲಕೋಟೆ: ಸಮೀಪದ ಸೂಳಿಕೇರಿ ಗ್ರಾಮದ ಮಾರುತೇಶ್ವರ ದೇವಸ್ಥಾನದ ಮಾರುತೇಶನಿಗೆ 5 ಕೆ.ಜಿ. ಬೆಳ್ಳಿ ಕವಚ ಹಾಗೂ ಆಭರಣಗಳನ್ನು ಸೂಳಿಕೇರಿ ಗ್ರಾಮದ ಬಿ.ಕೆ. ಪಾಟೀಲ ದೇಶಪಾಂಡೆ ಮನೆತನ ಹಾಗೂ ಸೀಮಿಕೇರಿ ಮನೆತನದವರು ಸಮರ್ಪಿಸಿದರು.
ಮುಂಜಾನೆ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಭಕ್ತರು ಪಾಲ್ಗೊಂಡಿದ್ದರು,
ಇದೇ ಸಂದರ್ಭದಲ್ಲಿ ಆದಿಶೇಷಾಚಾರ್ಯ ಯಲಗೂರು ಹಾಗೂ ವಿಜಯೇಂದ್ರ ಆಚಾರ್ಯ, ಯತ್ನಟ್ಟಿ ಪಡ್ನಿಸ ಆಚಾರ ಅವರಿಂದ ಹೋಮ, ಪ್ರವಚನ ನಡೆದವು. ಶ್ರೀರಾಮ ಮಂದಿರದಲ್ಲಿ ತೀರ್ಥ, ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಗೌರವ ಅಧ್ಯಕ್ಷ ಬಿ.ಕೆ. ಪಾಟೀಲ್ ಹಾಗೂ ಉತ್ಸವ ಸಮಿತಿ ಅಧ್ಯಕ್ಷ ಗೋವಿಂದರಾವ್ ದೇಶಪಾಂಡೆ ಮಾತನಾಡಿದರು. ರವಿ ದೇಶಪಾಂಡೆ, ಎಂ.ಕೆ. ಪಾಟೀಲ, ಜಿ.ಎನ್. ಸೂಳಿಕೇರಿ, ಮೊಹನ ದೇಶಪಾಂಡೆ, ಸಂಜೀವ ದೇಶಪಾಂಡೆ, ವಿ.ಎನ್. ಸೂಳಿಕೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.