
ರಬಕವಿ ಬನಹಟ್ಟಿ: ಇಂದಿನ ದಿನಗಳಲ್ಲಿ ನಾವು ನಿತ್ಯ ಹೊಸತನ್ನು ಕಲಿಯುವಂತಾಗಬೇಕು. ಆಧುನಿಕ ಜಗತ್ತಿಗೆ ಬೇಕಾದ ಜ್ಞಾನ ಮತ್ತು ಕೌಶಲಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಯಾವಾಗಲೂ ನಾವು ಹೊಸ ಚಿಂತನೆಗಳತ್ತ ನಮ್ಮ ಗಮನ ನೀಡಬೇಕು. ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರಿಗೆ ಗೌರವವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಎಸ್.ಎಸ್.ಹೂಲಿ ತಿಳಿಸಿದರು.
ಅವರು ಭಾನುವಾರ ಇಲ್ಲಿನ ಎಸ್‌ಟಿಸಿ ಕಾಲೇಜು ಸಭಾಭವನದಲ್ಲಿ 2011-14ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರು ವಂದನೆ ಮತ್ತು ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಚಾರ್ಯ ಡಾ. ಜಿ.ಆರ್.ಜುನ್ನಾಯ್ಕರ್ ಮಾತನಾಡಿ, ಹಳೆಯ ವಿದ್ಯಾರ್ಥಿಗಳೇ ಶಿಕ್ಷಣ ಸಂಸ್ಥೆಯ ಆಸ್ತಿ. ಕಾಲೇಜು ಅಭಿವೃದ್ಧಿಯಲ್ಲಿ ಹಳೆಯ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ. ಜೀವನದಲ್ಲಿ ಏಳು ಬೀಳುಗಳ ಮಧ್ಯದಲ್ಲಿಯೂ ಸುಂದರವಾದ ಬದುಕನ್ನು ಕಟ್ಟಿಕೊಳ್ಳುವುದು ಸಾಧನೆಯ ಸಂಗತಿಯಾಗಿದೆ ಎಂದರು.
ನಿವೃತ್ತ ಉಪನ್ಯಾಸಕ ಎಂ.ಎಸ್.ಬದಾಮಿ ಮಾತನಾಡಿ, ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಅಲೆದಾಡದೆ ಹೊಸ ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡು ಉದ್ಯೋಗಪತಿಗಳಾಗಲು ಶ್ರಮಿಸಬೇಕು ಎಂದರು.
ಉಪನ್ಯಾಸಕರಾದ ಮಲ್ಲಿಕಾರ್ಜುನ ಸಜ್ಜನವರ, ಎಸ್.ಬಿ.ಉಕ್ಕಲಿ, ವೈ.ಬಿ.ಕೊರಡೂರ, ವಿ.ಎಸ್.ಕೊಟಕನೂರ, ಸುವರ್ಣಾ ವರದಾಯಿ ಮಾತನಾಡಿದರು.
ರಶ್ಮಿ ಕೊಟಕನೂರ, ವೆಂಕಟೇಶ ಕುಲಕರ್ಣಿ, ವಿಶ್ವಜ ಕಾಡದೇವರ, ಕಾವೇರಿ ಜಗದಾಳ, ಲಕ್ಷ್ಮಿ ಖವಾಸಿ ಸೇರಿದಂತೆ ಅನೇಕ ಶಿಕ್ಷಕರನ್ನು ಸನ್ಮಾನಿಸಿದರು.
ಸಚಿನ ಬರಗಲ್, ಕುಮಾರ ಮೈತ್ರಿ, ಹರೀಶ ಹುಕ್ಕೇರಿ, ಅಶ್ವಿನಿ ಸಾರವಾಡ, ಅಮೀನ ಮುಲ್ಲಾ, ರಮೇಶ ಕುಂಬಾರ, ಮಧು ಗಿಡವೀರ, ಮಹಾದೇವ ಮೇಲಗಿರಿ, ಅರ್ಪಿತಾ ಭದ್ರನವರ, ಮಹಾದೇವ ಮೇಲಗಿರಿ ಮತ್ತು ಅಕ್ಷತಾ ಹೊಸಕೋಟಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.