
ರಾಂಪುರ: ಜೀವನದಲ್ಲಿ ದೊರೆಯುವ ಒಳ್ಳೆಯ ಅವಕಾಶಗಳನ್ನು ಬಳಸಿಕೊಂಡು ಎತ್ತರಕ್ಕೆ ಬೆಳೆಯಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕ ರಮೇಶ ದಡ್ಡಿ ಹೇಳಿದರು.
ಸಮೀಪದ ಮುಗಳೊಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಜರುಗಿದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಾಲೇಜು ಅಭಿವೃದ್ಧಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಸುನಗದ ಮಾತನಾಡಿದರು. ಪ್ರಾಚಾರ್ಯ ಎಸ್.ಎಸ್.ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಎಚ್.ಆರ್.ಹಡಪದ, ಬಿ.ಎಸ್.ಭಜನ್ನವರ, ಹಂಪಣ್ಣ ಅಂಗಡಿ, ಸಂಗಣ್ಣ ಕಲಾದಗಿ, ಸಾಹೇಬಗೌಡ ನಾಯ್ಕರ, ಮಂಜುನಾಥ ದೇವಣಗಾಂವಿ, ಬಸಪ್ಪ ತಳವಾರ, ಮಲ್ಲಯ್ಯ ಗಣಾಚಾರಿ, ರೇಣುಕಾ ಕಾಜಗಾರ, ಶಾಂತವ್ವ ಸೀಮಿಕೇರಿ, ಬ್ರಹ್ಮಲಿಂಗ ತಳವಾರ ಅತಿಥಿಗಳಾಗಿದ್ದರು.
2025 ರ ದ್ವಿತೀಯ ಪಿಯುಸಿಯಲ್ಲಿ ಕಾಲೇಜಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಹಂಪಣ್ಣ ಅಂಗಡಿ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು. ಇನ್ನೋರ್ವ ದಾನಿ ದ್ವಿತೀಯ ಪಿಯುಸಿಯ ಎಲ್ಲ 28 ವಿದ್ಯಾರ್ಥಿಗಳಿಗೆ ಕ್ಲಪ್ ಪ್ಯಾಡ್, ಪೆನ್ನು ಹಾಗೂ ಲೇಖನ ಸಾಮಾಗ್ರಿಗಳನ್ನು ನೀಡಿದರು. ಸಂಗೀತಾ ಹೆಳವರಗೆ ಆದರ್ಶ ವಿದ್ಯಾರ್ಥಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸರಸ್ವತಿ ಹಾಗೂ ತಂಡದವರು ಪ್ರಾರ್ಥಿಸಿದರು. ಜಿ.ಎಚ್.ಬಡಿಗೇರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಶಂಕರ ಮುತ್ತಗಿ ಮಾತನಾಡಿದರು. ಸಿ.ಆರ್.ಕೋಲಕಾರ, ಎಸ್.ಪಿ.ಹಿರೇಮಠ ನಿರೂಪಿಸಿದರು. ಎಸ್.ಡಿ.ಪಾಟೀಲ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.