ADVERTISEMENT

ಜಮಖಂಡಿ: ಡಿ. 23 ರಂದು ಟಿಪ್ಪು ಜಯಂತಿ, ಸರ್ವಧರ್ಮ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 5:13 IST
Last Updated 22 ಡಿಸೆಂಬರ್ 2025, 5:13 IST
ಜಮಖಂಡಿ: ಇಲ್ಲಿನ ಅಬುಬಕರ ದರ್ಗಾದಲ್ಲಿ ಸರ್ವಧರ್ಮ ಸಮ್ಮೆಳನದ ಬಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿದರು.
ಜಮಖಂಡಿ: ಇಲ್ಲಿನ ಅಬುಬಕರ ದರ್ಗಾದಲ್ಲಿ ಸರ್ವಧರ್ಮ ಸಮ್ಮೆಳನದ ಬಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿದರು.   

ಜಮಖಂಡಿ: ಹಜರತ್ ಟಿಪ್ಪು ಸುಲ್ತಾನ್ ಜಯಂತ್ಯೋತ್ಸವ ಹಿನ್ನಲೆಯಲ್ಲಿ ಡಿ.23 ರಂದು ಸಂಜೆ 5 ಗಂಟೆಗೆ ಅಬುಬಕರ ದರ್ಗಾದಲ್ಲಿ ಕೌಮಿ ಏಕತಾ ಸಮ್ಮೇಳನ (ಸರ್ವಧರ್ಮ ಸಮ್ಮೇಳನ) ಹಮ್ಮಿಕೊಳ್ಳಲಾಗಿದೆ ಎಂದು ಶಹೀದ ಹಜರತ ಟಿಪ್ಪು ಸುಲ್ತಾನ್‌ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಜವಳಿ ನಿಗಮದ ಮಾಜಿ ಉಪಾಧ್ಯಕ್ಷ ನಜೀರ ಕಂಗನೊಳ್ಳಿ ತಿಳಿಸಿದರು.

 ಅಬುಬಕರ ದರ್ಗಾದಲ್ಲಿ ಭಾನುವಾರ ಜಾಹೀರಾತು ಬಿಡುಗಡೆ ಮಾಡಿ ಮಾತನಾಡಿ ಸಮ್ಮೇಳನದಲ್ಲಿ ಬಿಹಾರದ ಮೌಲಾನಾ ಅಬ್ದುಲ್ಲಾಸಾಲೀಂ ಕಮರ ಚತುರ್ವೇದಿ, ಉತ್ತರ ಪ್ರದೇಶದ ಮೌಲಾನಾ ಹಜರತ್‌ಪೀರ ಸೈಯದ ಕಾಶಿಮ್ ಆಶ್ರಫ, ಹಾವೇರಿಯ ಉತ್ತರ ಕರ್ನಾಟಕ ಅಹಿಂದ ಗುರುಪೀಠ ಪೀಠಾಧ್ಯಕ್ಷರು ಮಹೇಶ್ವರಾನಂದ ಸ್ವಾಮೀಜಿ, ರುದ್ರಾವಧೂತ ಮಠದ ಸಹಜಾನಂದ ಅವಧೂತರು, ಒಲೆಮಠದ ಆನಂದ ದೇವರು, ಸುನ್ನತವಲ್ಲ ಜಮಾತ ಜಿಲ್ಲಾ ಅಧ್ಯಕ್ಷ ಕಾರಿ ಸಮಿವುಲ್ಲಾ ಖಾದ್ರಿ, ರೆವರೆಂಡ್ ಫಾದರ್‌ ಲಕ್ಷ್ಮಣ ಬಿ, ಹಜರತ ಮೌಲಾನಾ ಮೋಹಸೀನಾಹ್ಮದ ಇನಾಮಿ ಸಾನಿಧ್ಯ ವಹಿಸುವರು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ, ಬೃಹತ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಇಂಡಿಯನ್ ಟ್ರೇಡ್ ಯೂನಿಯನ್ ನ್ಯಾಶನಲ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಟಿ.ವೈ.ಕುಮಾರ, ಲಥೀಪಖಾನ್ ಪಠಾಣ, ಶಾಸಕ ಸಿದ್ದು ಸವದಿ, ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಆನಂದ ನ್ಯಾಮಗೌಡ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ADVERTISEMENT

ಇಂಡಿಯನ್ ಟ್ರೇಡ್ ಯೂನಿಯನ್ ನ್ಯಾಶನಲ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೌಫಿಕ ಪಾರ್ಥನಳ್ಳಿ ಮಾತನಾಡಿದರು.  ಅಲ್ತಾಫ ಸಗರ, ಸಮೀರ ಕಂಗನೊಳ್ಳಿ, ರಿಯಾಜ ಅವಟಿ, ಅಬ್ದುಲ ಜಮಾದಾರ, ಇಸಾ ಇನಾಮದಾರ, ಅಬುಬಕರ ಕುಡಚಿ, ಮಹಿಬೂಬ ಪೆಂಡಾರಿ, ಸಾಧಿಕ ಬಂಟನೂರ, ರೆಹಮಾನ ಜಮಖಂಡಿ, ಯಾಸೀನ ಲೋದಿ, ಮುಸ್ತಾಫ ಕರಜಗಿ, ಮುಸ್ತಾಕ ಝಂಡೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.