ADVERTISEMENT

ಮತ್ತೆ ರೇಲ್‌ಬಸ್ ಓಡಾಟ ಮಾರ್ಚ್ 16ರಿಂದ

ಬಾಗಲಕೋಟೆಯಿಂದ ಖಜ್ಜಿಡೋಣಿವರೆಗೆ ವಾರಕ್ಕೆ ಐದು ದಿನ ಪುಟ್ಟ ರೈಲಿನ ಓಡಾಟ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 14:32 IST
Last Updated 13 ಮಾರ್ಚ್ 2020, 14:32 IST
ರೇಲ್‌ಬಸ್
ರೇಲ್‌ಬಸ್   

ಬಾಗಲಕೋಟೆ: ನಷ್ಟದ ಕಾರಣಕ್ಕೆ ವರ್ಷದ ಹಿಂದೆ ಓಡಾಟ ನಿಲ್ಲಿಸಿದ್ದ ಬಾಗಲಕೋಟೆ–ಖಜ್ಜಿಡೋಣಿ ನಡುವಿನ ರೇಲ್‌ಬಸ್ ಮಾರ್ಚ್ 16ರಿಂದ ಮತ್ತೆ ಓಡಾಟ ಆರಂಭಿಸಲಿದೆ.

ಬಾಗಲಕೋಟೆ–ಕುಡಚಿ ನಡುವಿನ ಹೊಸ ರೈಲು ಮಾರ್ಗದಲ್ಲಿ ಖಜ್ಜಿಡೋಣಿವರೆಗೆ ಹಳಿ ಸಿದ್ಧವಾಗಿದ್ದ ಕಾರಣ ಅಲ್ಲಿ 70 ಆಸನಗಳ ಪುಟ್ಟ ರೇಲ್‌ಬಸ್‌ನ ಓಡಾಟವನ್ನು 2018ರ ಮಾರ್ಚ್‌ನಲ್ಲಿ ನೈರುತ್ಯ ರೈಲ್ವೆ ಆರಂಭಿಸಿತ್ತು. ಪ್ರಯಾಣಿಕರಿಂದ ಅಷ್ಟಾಗಿ ಸ್ಪಂದನೆ ದೊರೆಯದ ಕಾರಣ ಕೇವಲ ಎಂಟು ತಿಂಗಳಲ್ಲಿಯೇ (2019ರ ಫೆಬ್ರುವರಿ 7) ಪುಟ್ಟ ರೈಲು ಓಡಾಟ ನಿಲ್ಲಿಸಿತ್ತು.

ವಾರಕ್ಕೆ ಐದು ದಿನ ಮಾತ್ರ

ADVERTISEMENT

ಶನಿವಾರ ಹಾಗೂ ಭಾನುವಾರ ಹೊರತುಪಡಿಸಿ ವಾರದ ಐದು ದಿನ ರೇಲ್‌ಬಸ್ ಓಡಾಟ ನಡೆಸಲಿದೆ. ರೇಲ್‌ಬಸ್ ಮುಂಜಾನೆ 7.45ಕ್ಕೆ ಬಾಗಲಕೋಟೆ ರೈಲು ನಿಲ್ದಾಣದಿಂದ ಹೊರಡಲಿದ್ದು, 7.55ಕ್ಕೆ ನವನಗರ, 8.20ಕ್ಕೆ ಸೂಳಿಕೇರಿ, 8.38ಕ್ಕೆ ಕೆರಕಲಮಟ್ಟಿ, 8.56ಕ್ಕೆ ಹಿರೇಶೆಲ್ಲಿಕೇರಿ ನಿಲ್ದಾಣದಿಂದ ಹೊರಟು 9.30ಕ್ಕೆ ಖಜ್ಜಿಡೋಣಿ ತಲುಪಲಿದೆ. ಅಲ್ಲಿಂದ 10 ಗಂಟೆಗೆ ಹೊರಟು, 10.28ಕ್ಕೆ ಹಿರೇಶೆಲ್ಲಿಕೇರಿ, 10.51ಕ್ಕೆ ಕೆರಕಲಮಟ್ಟಿ, 11.13ಕ್ಕೆ ಸೂಳಿಕೇರಿ, 11.28ಕ್ಕೆ ನವನಗರ ನಿಲ್ದಾಣದಿಂದ ಹೊರಟು 11.45ಕ್ಕೆ ಬಾಗಲಕೋಟೆ ತಲುಪಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.