ADVERTISEMENT

ಗುಳೇದಗುಡ್ಡ| ಮಕ್ಕಳ ಮೇಲೆ ಬಿದ್ದಿದ್ದ ಗೇಟ್ ದುರಸ್ತಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 14:48 IST
Last Updated 9 ಜೂನ್ 2023, 14:48 IST
ಗುಳೇದಗುಡ್ಡ ತಾಲ್ಲೂಕಿನ ಹಳದೂರ ಗ್ರಾಮದ ಸರ್ಕಾರಿ ಆರೋಗ್ಯ ಉಪಕೇಂದ್ರದಲ್ಲಿ ಗುತ್ತಿಗೆದಾರರು ದುರಸ್ತಿಗೊಳಿಸಿದ ಗೇಟ್
ಗುಳೇದಗುಡ್ಡ ತಾಲ್ಲೂಕಿನ ಹಳದೂರ ಗ್ರಾಮದ ಸರ್ಕಾರಿ ಆರೋಗ್ಯ ಉಪಕೇಂದ್ರದಲ್ಲಿ ಗುತ್ತಿಗೆದಾರರು ದುರಸ್ತಿಗೊಳಿಸಿದ ಗೇಟ್   

ಗುಳೇದಗುಡ್ಡ: ತಾಲ್ಲೂಕಿನ ಹಳದೂರ ಗ್ರಾಮದ ಸರ್ಕಾರಿ ಆರೋಗ್ಯ ಉಪ ಕೇಂದ್ರದಲ್ಲಿ ಆಟವಾಡಲು ತೆರಳಿದ್ದ ಇಬ್ಬರು ಬಾಲಕರ ಮೇಲೆ ಉಪಕೇಂದ್ರದ ಗೇಟ್ ಬಿದ್ದು ಗಾಯಗಳಾದ ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಾ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಕಲಾದಗಿ ತಿಳಿಸಿದರು.

ಗುರುವಾರ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಆಸ್ಪತ್ರೆ ಗೇಟ್ ಬಿದ್ದು ಮಕ್ಕಳಿಗೆ ಗಾಯ ಎಂಬ ಶೀರ್ಷಿಕೆಯ ಸುದ್ದಿಗೆ ಸ್ಪಂದಿಸಿ ಮಾತನಾಡಿದ ಅವರು, ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗೇಟ್ ದುರಸ್ತಿಗೊಳಿಸಿದ್ದಾರೆ. ಗೇಟ್ ಮಕ್ಕಳ ಮೇಲೆ ಸಂಪೂರ್ಣ ಕಳಚಿ ಬಿದ್ದಿಲ್ಲ. ಮಕ್ಕಳ ಮೇಲೆ ಬಿದ್ದಿದ್ದರೆ ದೊಡ್ಡ ಅನಾಹುತ ಆಗುತ್ತಿತ್ತು. ಹಾಗೆ ಆಗದೇ ಮಕ್ಕಳು ಗೇಟ್ ತೆರೆದಾಗ ದಿಢೀರ್‌ ಗೇಟ್ ಬಡಿದು ಇದರಿಂದ ಗಾಯವಾಗಿದೆ. ಗಾಯಗೊಂಡ ಮಕ್ಕಳಿಗೆ ಗುತ್ತಿಗೆದಾರರು ಚಿಕಿತ್ಸೆ ಕೊಡಿಸಿದ್ದಾರೆ. ಮುಂದೆ ಈ ರೀತಿ ಘಟನೆ ನಡೆಯದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT