ADVERTISEMENT

ವಾಲ್ಮೀಕಿ ನಿಗಮ ಹಗರಣ | 23 ರಂದು ಸರ್ಕಾರದ ವಿರುದ್ಧ ಪ್ರತಿಭಟನೆ: ಪ್ರಕಾಶ ನಾಯ್ಕರ್

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 13:28 IST
Last Updated 16 ಜುಲೈ 2024, 13:28 IST

ಬಾದಾಮಿ: ರಾಜ್ಯ ಸರ್ಕಾರದ ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದ ವಿರುದ್ಧ ಮತ್ತು ವಾಲ್ಮೀಕಿ ಸಮುದಾಯದ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಜುಲೈ 23 ರಂದು ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ತಾಲ್ಲೂಕು ಘಟಕದ ಆಶ್ರಯದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ನಾಯ್ಕರ್ ಹೇಳಿದರು.

‘ಮುಖ್ಯಮಂತ್ರಿ, ಸಚಿವರು ಮತ್ತು ಅಧಿಕಾರಿಗಳು ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಲ್ಲಿ ಶಾಮೀಲಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ವಾಲ್ಮೀಕಿ ಜನಾಂಗದ ವಿದ್ಯಾರ್ಥಿ, ಕಾರ್ಮಿಕರು ಮತ್ತು ರೈತರಿಗೆ ಬಳಕೆಯಾಗಬೇಕಿದ್ದ ನಿಗಮದ ಹಣವು ದುರ್ಬಳಕೆಯಾದ ಕಾರಣ ಶಾಸಕರನ್ನು ಹುದ್ದೆಯಿಂದ ವಜಾಗೊಳಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ, ಗ್ರಾಮಗಳಲ್ಲಿ ಪ್ರಬಲ ಸಮುದಾಯದಿಂದ ದಬ್ಬಾಳಿಕೆ, ತಾಲ್ಲೂಕಿನ ವಾಲ್ಮೀಕಿ ಸಮುದಾಯ ಭವನದ ಕಟ್ಟಡ, ಮೂರು ವರ್ಷಗಳಿಂದ ಕೃಷಿ ಉಪಕರಣ ಕೊರತೆ, ಗುತ್ತಿಗೆದಾರರಿಗೆ ಬಿಲ್ ಬಾಕಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬಾರದ ವೇತನ ಹೀಗೆ ಅನೇಕ ಸಮಸ್ಯೆಗಳು ಹಾಗೆಯೇ ಇವೆ’ ಎಂದು ಹೇಳಿದರು.

‘ಎಸ್.ಸಿ/ಎಸ್.ಟಿ ಅನುದಾನವನ್ನು ಜನಾಂಗದ ಏಳ್ಗೆಗೆ ಬಳಸುವ ಬದಲು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿದೆ’ ಎಂದು ಆರೋಪಿಸಿದರು.

ಮಹಾಂತೇಶ ತಳವಾರ, ಕಲ್ಲಪ್ಪ ಬೆಳಕೊಪ್ಪ, ಹನುಮಂತಪ್ಪ ಸುಳ್ಳದ, ಗೋವಿಂದಪ್ಪ ತಳವಾರ, ರಾಮಪ್ಪ ಕಾವಳ್ಳಿ, ಪ್ರಭು ಸುಳ್ಳದ, ಭರಮಪ್ಪ ಕಾಟನ್ನವರ, ಕಲ್ಲಪ್ಪ ಬೆನಕೊಪ್ಪ, ರಮೇಶ ಗೌಡರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.