ADVERTISEMENT

Photos | ಮಲಪ್ರಭಾ ನದಿಗೆ ನೀರು: ನೂರಾರು ಎಕರೆ ಪೈರು ಜಲಾವೃತ

ಬಾಗಲಕೋಟೆ: ಮಲಪ್ರಭಾ ನದಿಗೆ ಸವದತ್ತಿಯ ನವಿಲುತೀರ್ಥ ಜಲಾಶಯದಿಂದ ಭಾನುವಾರ 6,500 ಕ್ಯೂಸೆಕ್ ನೀರು ಹರಿಯ ಬಿಡಲಾಗಿದೆ.ಇದರಿಂದ ಗೋವನಕೊಪ್ಪ ಚಿಕ್ಕ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ನದಿ ಪಾತ್ರದ ಅಕ್ಕಪಕ್ಕದ ಹೊಲಗದ್ದೆಗಳಿಗೆ ನೀರು ನುಗ್ಗಿದ್ದು, ನೂರಾರು ಎಕರೆ ಮೆಕ್ಕೆಜೋಳ, ಕಬ್ಬು ಹಾಗೂ ಹೆಸರು ಜಲಾವೃತವಾಗಿವೆ‌.ಹುಬ್ಬಳ್ಳಿ- ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಚಿಕ್ಕ ಸೇತುವೆ ಜಲಾವೃತವಾಗಿದೆ.ಗೋವನಕೊಪ್ಪ-ಕೊಣ್ಣೂರು ಗ್ರಾಮದ ಮಧ್ಯದ ಸಂಪಕ೯ ಬಂದ್ ಆಗಿದ್ದು, ರಾಷ್ಟ್ರೀಯ ಹೆದ್ದಾರಿಯ ಪರ್ಯಾಯ ಮಾರ್ಗದ ಮೂಲಕ ಜನರು ಸಂಚರಿಸುತ್ತಿದ್ದಾರೆ.

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 9:54 IST
Last Updated 9 ಆಗಸ್ಟ್ 2020, 9:54 IST
   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.