ADVERTISEMENT

ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಮಹಿಳೆಯ ರಂಪ-ರಾದ್ಧಾಂತ: ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 12:50 IST
Last Updated 18 ಸೆಪ್ಟೆಂಬರ್ 2021, 12:50 IST
ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಮಹಿಳೆ ರಂಪ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಮಹಿಳೆ ರಂಪ   

ಬಾಗಲಕೋಟೆ: ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಲಸಿಕೆ ಹಾಕಲು ಬಂದಾಗ ಇಳಕಲ್ ತಾಲ್ಲೂಕಿನ ತಳ್ಳಿಕೇರಿಯಲ್ಲಿ ಮಹಿಳೆಯೊಬ್ಬರು ರಂಪ-ರಾದ್ಧಾಂತ ನಡೆಸಿರುವುದು ವೈರಲ್ ಆಗಿದೆ.

ಜಿಲ್ಲಾಡಳಿತ ಶುಕ್ರವಾರ ಹಮ್ಮಿಕೊಂಡಿದ್ದ ಕೋವಿಡ್ ಲಸಿಕೆ ಮಹಾ ಅಭಿಯಾನದ ವೇಳೆ ಈ ನಾಟಕೀಯ ಬೆಳವಣಿಗೆ ನಡೆದಿದೆ. ಲಸಿಕೆ ಹಾಕಿಸಿಕೊಳ್ಳಲು ಒಪ್ಪದ ಮಹಿಳೆ ಗಲಾಟೆ ಮಾಡಿದ್ದಾರೆ.

'ನಾ ಒಲ್ಲೆ ನನ್ನನ್ನು ಬಿಟ್ಟು ಬಿಡಿ' ಎಂದು ರಾದ್ಧಾಂತ ಮಾಡಿದ್ದಾರೆ. ಬಾಯಿ ಬಡಿದುಕೊಂಡು ಚೀರಾಡಿದ ಮಹಿಳೆಯನ್ನು ಮನೆಮಂದಿ ಸೇರಿ ಗಟ್ಟಿಯಾಗಿ ಹಿಡಿದುಕೊಂಡು ಲಸಿಕೆ‌ ಹಾಕಿಸಿದ್ದಾರೆ.

ADVERTISEMENT

ಲಸಿಕೆ ಹಾಕಲು ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆ, ಗ್ರಾಮ ಪಂಚಾಯ್ತಿ ಸಿಬ್ಬಂದಿ ಹರಸಾಹಸ ಪಟ್ಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.