
ಪ್ರಜಾವಾಣಿ ವಾರ್ತೆ
ಸವದತ್ತಿ ಯಲ್ಲಮ್ಮದೇವಿ ಜಾತ್ರೆಗೆ ತೆರಳಿದ್ದ ಗುಳೇದಗುಡ್ಡ ತಾಲ್ಲೂಕಿನ ಬೂದನಗಡ ಗ್ರಾಮದ ಬಂಡಿಗಳನ್ನು ಮೆರವಣಿಗೆ ಮಾಡಲಾಯಿತು
ಗುಳೇದಗುಡ್ಡ: ಸವದತ್ತಿ ಯಲ್ಲಮ್ಮದೇವಿ ಜಾತ್ರೆಗೆ ಸಮೀಪದ ಬೂದನಗಡ ಗ್ರಾಮದಿಂದ ಸುಮಾರು 52ಕ್ಕೂ ಹೆಚ್ಚು ಬಂಡಿಗಳು ತೆರಳಿ ಸುರಕ್ಷಿತವಾಗಿ ಗ್ರಾಮಕ್ಕೆ ಆಗಮಿಸಿದವು. ಈ ಹಿನ್ನೆಲೆಯಲ್ಲಿ ಕೋಟೆಕಲ್ ಅಮರೇಶ್ವರ ಮಠದ ಹತ್ತಿರದಿಂದ ಬೂದನಗಡ ಗ್ರಾಮದವರೆಗೆ ಬಂಡಿಗಳ ಮೆರವಣಿಗೆ ಬುಧವಾರ ನಡೆಯಿತು.
ಪ್ರತಿ ವರ್ಷ ಯಲ್ಲಮ್ಮದೇವಿ ಜಾತ್ರೆ ಅಂಗವಾಗಿ ಬೂದನಗಡ ಗ್ರಾಮದ ಅರ್ಧ ಊರಿನಷ್ಟು ಜನರು ಈ ಜಾತ್ರೆಗೆ ತೆರಳಿ ಭಕ್ತಿಭಾವ ಮೆರೆದರು. ಜಾತ್ರೆಗೆ ಗ್ರಾಮದಿಂದ ಸುಮಾರು 52 ಬಂಡಿ, 12 ಟ್ರಾಕ್ಟರ್, 60 ಬೈಕ್, 15 ಟಂಟಂಗಳಲ್ಲಿ ಜನರು ತೆರಳಿದರು.
ಕೋಟೆಕಲ್ ಗ್ರಾಮದಲ್ಲಿ ಯಲ್ಲಮ್ಮದೇವಿಗೆ ಪಡಲಗಿ ತುಂಬಿದರು. ಬೂದನಗಡ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.