ಹೂವಿನಹಡಗಲಿ: ಉತ್ತರ ಭಾರತದಲ್ಲಿ ಉಂಟಾಗಿರುವ ಪ್ರವಾಹದಲ್ಲಿ ಸಿಲುಕಿ ಸಂಪರ್ಕ ಕಡಿದುಕೊಂಡಿದ್ದ ಹೂವಿನಹಡಗಲಿಯ ಅಮರನಾಥ ಯಾತ್ರಿಗಳು ಸುರಕ್ಷಿತವಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಪಟ್ಟಣ ವಾಸಿಗಳಾದ ಎಸ್.ಎಂ. ಗೋಪಾಲಶೆಟ್ಟಿ, ಪತ್ನಿ ಗಂಗಮ್ಮ, ಪುತ್ರ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ರಾಘವೇಂದ್ರ ಶೆಟ್ಟಿ, ಸೊಸೆ ಮೇಘನಾ, ವಿಜಾಪುರದ ಸಂಬಂಧಿಗಳಾದ ಎಂಜಿನಿಯರ್ ನರಸಯ್ಯ ಶೆಟ್ಟಿ, ಭಾಸ್ಕರ ಶೆಟ್ಟಿ, ಪಂಕಜ ಅವರು ಬದರಿನಾಥದ ವಸತಿಗೃಹವೊಂದರಲ್ಲಿ ತಂಗಿದ್ದಾರೆ ಎಂದು ಅವರ ಸಂಬಂಧಿ, ವರ್ತಕ ಎಸ್.ಎಂ. ರವೀಂದ್ರ ಶೆಟ್ಟಿ ತಿಳಿಸಿದ್ದಾರೆ.
ಉತ್ತರ ಭಾರತದಲ್ಲಿ ಪ್ರವಾಹ ಹೆಚ್ಚಾಗಿರುವುದರಿಂದ ಹವಾಮಾನ ವೈಪರೀತ್ಯ ಉಂಟಾಗಿ ಎಲ್ಲರ ಮೊಬೈಲ್ ಸಂಪರ್ಕ ಕಡಿದುಕೊಂಡಿವೆ. ಪ್ರವಾಹ ಮುನ್ಸೂಚನೆಯಿಂದಾಗಿ ಯಾತ್ರೆ ಕೈಬಿಟ್ಟು ಸುರಕ್ಷಿತ ಸ್ಥಳದಲ್ಲಿ ತಂಗಿದ್ದು, ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.