ಬಳ್ಳಾರಿ: ಶ್ರೀರಾಮುಲು ಏನು ಮಾಡುತ್ತಿದ್ದಾರೆ ಎನ್ನುವುದು ಅವರಿಗೇ ತಿಳಿದಿಲ್ಲ..! ಜೈಲಿನಲ್ಲಿರುವ ಜನಾರ್ದನ ರೆಡ್ಡಿ ಹೇಳಿದಂತೆ ಇವರು ನಡೆಯು ತ್ತಿದ್ದಾರೆ. ಪಾದಯಾತ್ರೆಗೆ ಬಳಕೆ ಆಗು ತ್ತಿರುವುದು ಸಹ ಅಕ್ರಮ ಗಣಿಗಾರಿಕೆ ದುಡ್ಡು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ತಾಲ್ಲೂಕಿನ ಮಧುರೆ ಗ್ರಾಮದಲ್ಲಿ ಗುರುವಾರ ಹನ್ನೊಂದು ವರುಷಗಳಿ ಗೊಮ್ಮೆ ನಡೆಯುವ ಹಾಲುಮತ ದೈವ ಶ್ರೀ ಕೆಂಚಮಾಳೇಶ್ವರ ದೇವಸ್ಥಾನ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗ ವಹಿಸಿದ ಅವರು ಶ್ರೀರಾಮುಲು ಪಾದ ಯಾತ್ರೆಯ ಉದ್ದೇಶ ಏನು ಎಂಬುದು ಸ್ವತಃ ಅವರಿಗೆ ತಿಳಿದಿಲ್ಲ. ರಾಮುಲು ಮಾಡುತ್ತಿರುವ ಪಾದಯಾತ್ರೆ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.
ಅಧಿಕಾರದಲ್ಲಿದ್ದಾಗ ಏನು ಮಾಡಲಿಲ್ಲ? ಯಾರು ಮಾಡದ ಸಾಧನೆ ಬಿಜೆಪಿ ಮಾಡಿದೆ ಎಂದು ಅಧಿಕಾರ ಕಳೆದುಕೊಂಡ ಮೇಲೆ ಪಾದಯಾತ್ರೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಇಷ್ಟೊಂದು ಜನರೊಂದಿಗೆ ಪಾದ ಯಾತ್ರೆ ಮಾಡಲು ಹಣ ಎಲ್ಲಿಂದ ಬಂತು? ಅಕ್ರಮವಾಗಿ ದುಡಿದ ಹಣ ದಿಂದ ಪಾದಯಾತ್ರೆ ಮಾಡುತ್ತಿದ್ದಾರೆ. ಶ್ರೀರಾಮುಲು ಬಗ್ಗೆ ಮಾತನಾಡುವುದು ವ್ಯರ್ಥ ಎಂದು ರೆಡ್ಡಿಯ ತಾಳಕ್ಕೆ ಕುಣಿಯುತ್ತಾರೆ ಎಂದು ಪಾದಯಾತ್ರೆ ಯನ್ನು ಗೇಲಿ ಮಾಡಿದರು.
ಮೇ 6ರಂದು ದಾವಣಗೆರೆಯಲ್ಲಿ ನಡೆಯುವ ಕುರುಬರ ಸಮಾವೇಶವು ಅದು ತಮ್ಮ ಶಕ್ತಿ ಪ್ರದರ್ಶನವಲ್ಲ, ಕಳೆದ 100 ವರುಷದ ಹಿಂದೆ ಕುರುಬ ಸಮಾಜದ ಸಮಾವೇಶ ಮಾಡ ಲಾಗಿತ್ತು, ಇದೀಗ ಪ್ರದೇಶ ಕುರುಬ ಸಂಘವು ಮೇ 6ರಂದು ಸಮಾವೇಶ ವನ್ನು ಮಾಡುತ್ತಿದೆ. ಸಮಾವೇಶವನ್ನು ಸಂಘದವರು ಮಾಡುತ್ತಿದ್ದು, ಅದು ಪಕ್ಷಾತೀತ ಸಮಾವೇಶವಾಗಿದೆ. ಎಲ್ಲ ಪಕ್ಷದವರಿಗೆ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ವಿಫಲ: ಬರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸರ್ಕಾರದ ವಿರುದ್ಧ ಹರಿ ಹಾಯ್ದ ಸಿದ್ಧರಾಮಯ್ಯ ರಾಯಚೂರಿನ ಐದು ಘಟಕಗಳು ನಿಲ್ಲುವ ವರೆಗೂ ಇವರು ಏನು ಮಾಡುತ್ತಿದ್ದರು. ಬರ ನಿರ್ವ ಹಣೆ ಪತ್ರಿಕೆಗಳ ಹೇಳಿಕೆಗೆ ಸೀಮಿತವಾಗಿದೆ. ಬರ ಕುರಿತಂತೆ ಕೇಂದ್ರದ ಜತೆ ಮಾತ ನಾಡಲು ಸರ್ವ ಪಕ್ಷ ನಿಯೋಗ ಹೋಗುವುದಾದರೆ ನಾವು ಸದಾ ಸಿದ್ಧ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟರಾವ್ ಘೋರ್ಪಡೆ, ಮಾಜಿ ಶಾಸಕ ಕೆ.ಎಸ್.ಎಲ್. ಸ್ವಾಮಿ, ರತನ್‌ಸಿಂಗ್, ಗಿರಿ ಮಲ್ಲಪ್ಪ, ರಾಮಪ್ರಸಾದ್, ಸಿದ್ದ ಮಲ್ಲಪ್ಪ, ಬೆಣಕಲ್ ಬಸವರಾಜ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.