ADVERTISEMENT

ವೈಭವದ ಗ್ರಾಮದೇವತೆ ಮಾರೆಮ್ಮ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 10:25 IST
Last Updated 7 ಏಪ್ರಿಲ್ 2012, 10:25 IST

ಕಂಪ್ಲಿ:  ಪಟ್ಟಣದ ಡಾ. ರಾಜ್‌ಕುಮಾರ್ ಮುಖ್ಯ ರಸ್ತೆಯಲ್ಲಿರುವ ಗ್ರಾಮದೇವತೆ ಶ್ರೀ ಮಾರೆಮ್ಮದೇವಿಯ ಗಂಗೆ ಸ್ಥಳ ಮಹೋತ್ಸವ ಶುಕ್ರವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.

ಪಟ್ಟಣದ ಕೋಟೆ ತುಂಗಭದ್ರಾ ನದಿಯಿಂದ ಮಾರೆಮ್ಮ ದೇವಿಯ ಗಂಗೆ ಸ್ಥಳ ಪೂಜೆ ನೆರವೇರಿಸಿ, ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ  ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು.

ಮಹೋತ್ಸವ ನಿಮಿತ್ತ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ನೆರವೇರಿಸಿದ ನಂತರ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.

ಶಾಸಕ ಟಿ.ಎಚ್. ಸುರೇಶಬಾಬು ಸೇರಿದಂತೆ ಸದ್ಭಕ್ತರು ಮಾರೆಮ್ಮ ದೇವಿಯ ದರ್ಶನ ಪಡೆದರು. ನಂತರ ಅನ್ನಸಂತರ್ಪಣೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.