ADVERTISEMENT

‘ಸದಾಶಿವ ಆಯೋಗದ ವರದಿ ಅವಾಸ್ತವಿಕ’

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 8:47 IST
Last Updated 16 ಜನವರಿ 2018, 8:47 IST

ಕಂಪ್ಲಿ: ಇಲ್ಲಿಗೆ ಸಮೀಪದ ನಂ.10 ಮುದ್ದಾಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಿಸಲಾಯಿತು. ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆಯ ಕ್ರಾಂತಿ ಕಂಪ್ಲಿ ವಿಧಾನಸಭಾ ಕ್ಷೇತ್ರ ಕಾರ್ಯಾಧ್ಯಕ್ಷ ವಿ. ವೆಂಕಟೇಶ್ ಮಾತನಾಡಿ, ‘ಸಮಾನತೆ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಿದ ಸಿದ್ಧರಾಮೇಶ್ವರರ ಆದರ್ಶ, ಮೌಲ್ಯಗಳು ಸಾರ್ವಕಾಲಿಕ’ ಎಂದರು.

‘ಸದಾಶಿವ ಆಯೋಗದ ವರದಿ ವಾಸ್ತವಾಂಶಗಳಿಂದ ಕೂಡಿಲ್ಲ. ಈ ವರದಿ ಅನುಷ್ಠಾನಗೊಂಡರೆ ಆರ್ಥಿಕವಾಗಿ, ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಭೋವಿ ಸಮಾಜಕ್ಕೆ ಅನ್ಯಾಯವಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಎಸ್. ಮಹಾಂತಮ್ಮ, ಉಪಾಧ್ಯಕ್ಷ ವೈ. ಉಮೇಶ್, ಸದಸ್ಯ ಎ. ತಾಯಣ್ಣ, ಬಂಡಾರಿ ನರಸಣ್ಣ, ಎಚ್. ಮಲ್ಲಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ಎ.ರಾಜೇಶ್ವರಿ, ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆ ಕ್ರಾಂತಿಯ ಕ್ಷೇತ್ರ ಉಪಾಧ್ಯಕ್ಷ ವಿ. ನಾಗರಾಜ, ನಗರ ಅಧ್ಯಕ್ಷ ಎ.ವಿ. ಲೋಕೇಶ್, ಜಿಲ್ಲಾ ಸಮಿತಿ ಸದಸ್ಯ ವಿ.ಟಿ. ವಿಶ್ವನಾಥ, ಜಿಲ್ಲಾ ಸಮಿತಿ ಸದಸ್ಯರಾದ ವಿ. ನಾಗೇಂದ್ರ, ವಿ. ಗಾಳೆಪ್ಪ ಇದ್ದರು‌.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.