ADVERTISEMENT

ಅಖಂಡ‌ ಬಳ್ಳಾರಿ ಹೋರಾಟ ಸಮಿತಿ ಮುಖಂಡರ ಅಹವಾಲು ಆಲಿಸಿದ ಸಚಿವ ಆನಂದ್ ಸಿಂಗ್

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 7:54 IST
Last Updated 23 ಡಿಸೆಂಬರ್ 2020, 7:54 IST
ಅಖಂಡ ಬಳ್ಳಾರಿ ಹೋರಾಟ‌ ಸಮಿತಿಯ ಮುಖಂಡರನ್ನು ಮುಷ್ಕರದ ವೇದಿಕೆ ಬಳಿಯೇ ಭೇಟಿ ಮಾಡಿದ ಉಸ್ತುವಾರಿ ಸಚಿವ ಆನಂದ್ ಸಿಂಗ್
ಅಖಂಡ ಬಳ್ಳಾರಿ ಹೋರಾಟ‌ ಸಮಿತಿಯ ಮುಖಂಡರನ್ನು ಮುಷ್ಕರದ ವೇದಿಕೆ ಬಳಿಯೇ ಭೇಟಿ ಮಾಡಿದ ಉಸ್ತುವಾರಿ ಸಚಿವ ಆನಂದ್ ಸಿಂಗ್   

ಬಳ್ಳಾರಿ: ಜಿಲ್ಲೆಯ ವಿಭಜನೆಯನ್ನು ವಿರೋಧಿಸಿ ಅನಿರ್ದಿಷ್ಟ ಅವಧಿಯ ಮುಷ್ಕರ‌ ನಡೆಸಿರುವ ಅಖಂಡ ಬಳ್ಳಾರಿ ಹೋರಾಟ‌ ಸಮಿತಿಯ ಮುಖಂಡರನ್ನು ಮುಷ್ಕರದ ವೇದಿಕೆ ಬಳಿಯೇ ಭೇಟಿ ಮಾಡಿದ ಉಸ್ತುವಾರಿ ಸಚಿವ ಆನಂದ್ ಸಿಂಗ್, ಅಹವಾಲುಗಳನ್ನು ಆಲಿಸಿದರು.

'ರಾಜಕೀಯ ಕಾರಣಗಳಿಗಾಗಿ ಜಿಲ್ಲೆಯನ್ನು ವಿಭಜಿಸಿಲ್ಲ. ಸಣ್ಣ ಜಿಲ್ಲೆಗಳಲ್ಲಿ ಅಭಿವೃದ್ಧಿ ಹೆಚ್ಚು ವೇಗ ಪಡೆಯುತ್ತದೆ. ಆದರೂ ಎಲ್ಲರೂ ಆಕ್ಷೇಪಣೆಗಳನ್ನು ಸಲ್ಲಿಸಿ' ಎಂದು ಸಲಹೆ ನೀಡಿದರು.

ಆಗ್ರಹ; 'ಬಳ್ಳಾರಿ ಆಂಧ್ರ ಗಡಿಪ್ರದೇಶದಲ್ಲಿದ್ದು, ಮುಂದೊಂದು ದಿನ ಬೆಳಗಾವಿಯಲ್ಲಾದಂತೆ ಭಾಷಾ ಸೌಹಾರ್ದತೆ ಕದಡಲು ಅವಕಾಶ ಕೊಡಬಾರದು. ಜಿಲ್ಲೆಯನ್ನು ಒಡೆಯದೆ ಅಖಂಡ ಬಳ್ಳಾರಿಗೆ ವಿಜಯನಗರ ಜಿಲ್ಲೆ ಎಂದು ಹೆಸರಿಡಿ' ಎಂದು ಹೋರಾಟಗಾರರು ಆಗ್ರಹಿಸಿದರು.

'ನಿಮ್ಮಿಂದ ಮಾತ್ರ ಜಿಲ್ಲೆಯ ವಿಭಜನೆ‌ಯನ್ನು ತಪ್ಪಿಸಲು ಸಾಧ್ಯ' ಎಂದು ಪ್ರತಿಪಾದಿಸಿದರು.

ADVERTISEMENT

ಅವರಿಗೆ ಪ್ರತಿಕ್ರಿಯಿಸಿದ ಸಚಿವರು, ' ಪಶ್ಚಿಮ ತಾಲೂಕುಗಳ ಅಹವಾಲನ್ನೂ ಆಲಿಸಬೇಕು. ಜಿಲ್ಲಾ ಕೇಂದ್ರವಾಗಿರುವ ಬಳ್ಳಾರಿಗೆ ಬರಲು‌ ಆ ಭಾಗದ ಜನರಿಗೆ ಹೆಚ್ಚು ಕಷ್ಟವಾಗುತ್ತಿದೆ. ಹೊಸ ಜಿಲ್ಲೆಯಿಂದ ಈ ಕಷ್ಟ ತಪ್ಪುತ್ತದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.