ADVERTISEMENT

ಅಂಗನವಾಡಿ ಕಾರ್ಯಕರ್ತೆಯರಿಂದ ಆಹಾರ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 15:06 IST
Last Updated 7 ಜೂನ್ 2021, 15:06 IST
ಸಿಡಿಪಿಒ ಸಿಂಧು ಅಂಗಡಿ ಅವರು ಸೋಮವಾರ ಹೊಸಪೇಟೆಯಲ್ಲಿ ಆರ್ಥಿಕವಾಗಿ ದುರ್ಬಲರಾದವರಿಗೆ ಆಹಾರದ ಕಿಟ್‌ ವಿತರಿಸಿದರು
ಸಿಡಿಪಿಒ ಸಿಂಧು ಅಂಗಡಿ ಅವರು ಸೋಮವಾರ ಹೊಸಪೇಟೆಯಲ್ಲಿ ಆರ್ಥಿಕವಾಗಿ ದುರ್ಬಲರಾದವರಿಗೆ ಆಹಾರದ ಕಿಟ್‌ ವಿತರಿಸಿದರು   

ಹೊಸಪೇಟೆ (ವಿಜಯನಗರ): ಅಂಗನವಾಡಿ ಕಾರ್ಯಕರ್ತೆಯರು ಸೋಮವಾರ ನಗರದಲ್ಲಿ ಆರ್ಥಿಕವಾಗಿ ದುರ್ಬಲರಾದವರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದರು.

ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಒಂದು ದಿನದ ವೇತನ ವಿನಿಯೋಗಿಸಿ 300 ಆಹಾರ ಕಿಟ್, ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನು ವಿತರಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಅಂಗಡಿ ಅವರು ಚಾಲನೆ ನೀಡಿ, ‘ತಾಲ್ಲೂಕಿನ ಅಂಗನವಾಡಿ ಕಾರ್ತಕರ್ತೆಯರು ಕೋವಿಡ್‌ ಸಂಕಷ್ಟದಲ್ಲಿರುವವರಿಗೆ ಒಂದು ದಿನದ ವೇತನವನ್ನು ವಿನಿಯೋಗಿಸಿ ಆಹಾರದ ಕಿಟ್‌ಗಳನ್ನು ಅವಶ್ಯಕತೆ ಇರುವವರಿಗೆ ವಿತರಿಸುತ್ತಿರುವುದು ಶ್ಲಾಘನಾರ್ಹ ಕೆಲಸವಾಗಿದೆ’ ಎಂದರು.

ADVERTISEMENT

ಅಂಗನವಾಡಿ ನೌಕರರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷೆ ಕೆ.ನಾಗರತ್ನಮ್ಮ ಮಾತನಾಡಿ, ‘ಸಂಕಷ್ಟದಲ್ಲಿರುವ ಪುನರ್ವಸತಿ ಕಲ್ಪಿತ ದೇವದಾಸಿಯರು, ಒಂಟಿ ಮಹಿಳೆಯರು, ತೃತೀಯ ಲಿಂಗಿಗಳು, ಎಚ್‌ಐವಿ ಪೀಡಿತ ಪೌರಕಾರ್ಮಿಕ ವರ್ಗದ ಮಹಿಳೆಯರು ಸೇರಿದಂತೆ ಒಟ್ಟು 300 ಜನರಿಗೆ ಅಕ್ಕಿ, ಬೇಳೆ, ರವೆ, ಸಕ್ಕರೆ ಹಾಗೂ ಇತರೆ ಅಗತ್ಯ ವಸ್ತುಗಳನ್ನು ಒಳಗೊಂಡ ಕಿಟ್‌ ವಿತರಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಕಡಿಮೆ ವೇತನವಿದ್ದರೂ ಮತ್ತೊಬ್ಬರ ನೆರವಿಗೆ ಬಂದಿರುವುದು ಉತ್ತಮ ಕೆಲಸ’ ಎಂದು ಹೇಳಿದರು.

ಸಿಡಿಪಿಒ ಕಚೇರಿಯ ಅನುಪಮಾ, ವಿಕ್ರಮ್, ಅಂಗನವಾಡಿ ಕಾರ್ಯಕರ್ತೆಯರಾದ ಶಕುಂತಲ, ಅಂಜಲಿ ಬೆಳಗಲ್, ಸಕ್ರಮ್ಮ, ಫಾತಿಮಾ, ಸಿಐಟಿಯು ಸಂಘಟನೆಯ ಭಾಸ್ಕರ್ ರೆಡ್ಡಿ, ಎಂ.ಗೋಪಾಲ್, ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.