
ಪ್ರಜಾವಾಣಿ ವಾರ್ತೆದಂಡ (ಸಾಂದರ್ಭಿಕ ಚಿತ್ರ)
– ಐಸ್ಟಾಕ್ ಚಿತ್ರ
ಬಳ್ಳಾರಿ: ಬಾಲಕನಿಗೆ ಬೈಕ್ ನೀಡಿದ್ದ ಮಹಿಳೆಗೆ ₹25 ಸಾವಿರಗಳ ದಂಡ ವಿಧಿಸಿರುವ ನ್ಯಾಯಾಲಯ, ಇನ್ನೊಮ್ಮೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿದೆ.
ಕಳೆದ ವರ್ಷ ಮೇನಲ್ಲಿ ನಡೆದಿದ್ದ ಅಪಘಾತ ಪ್ರಕರಣವೊಂದರಲ್ಲಿ ನಗರದ ಟ್ರಾಫಿಕ್ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಬಾಲಕನಿಗೆ ವಾಹನ ನೀಡಿದ್ದು ತಾವೇ ಎಂದು ತಾರಾಬೀ ಎಂಬುವವರು ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದರು.
ಅಪ್ರಾಪ್ತರು ವಾಹನ ಚಲಾಯಿಸುವುದು ಹೇಗೆ ಅಪರಾಧವೋ, ಅವರಿಗೆ ವಾಹನ ನೀಡುವುದೂ ಅಪರಾದ ಎಂದು ಪರಿಗಣಿಸಿದ ಬಳ್ಳಾರಿಯ 3ನೇ ಎ.ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಮುದುಕಪ್ಪ ಓದನ್ ದಂಡ ವಿಧಿಸಿದರು.