ಬಳ್ಳಾರಿ: ಬಾಲಕರಿಬ್ಬರು ಬಹಿರ್ದೆಸೆಗೆಂದು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದ ಹತ್ತಿರವಿರುವ ಹಳ್ಳದಲ್ಲಿ ನಡೆದಿದೆ.
ಗ್ರಾಮದ ಚೌಡಿಕಿ ಕುಟುಂಬಕ್ಕೆ ಸೇರಿದ ಮಣಿಕಂಠ(14), ಹರ್ಷವರ್ಧನ(9) ಮೃತ ಬಾಲಕರು ಒಂದೇ ಕುಟುಂಬಕ್ಕೆ ಸೇರಿದ ಸಹೋದರರು ಇವರಾಗಿದ್ದಾರೆ. ಒಬ್ಬ ಬೈಲೂರಿನಲ್ಲಿ, ಮತ್ತೊಬ್ಬ ಬಳ್ಳಾರಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಗ್ರಾಮದಲ್ಲಿ ನಡೆದ ಅಂಬಾದೇವಿ ಜಾತ್ರೆಗೆ ಈ ಬಾಲಕರು ಬಂದಿದ್ದರು.
ಈ ಕುಟುಂಬದಲ್ಲಿ ಒಟ್ಟು ಮೂವರು ಸಹೋದರರಿದ್ದು, ಮೂವರೂ ಸೇರಿ ಬಹಿರ್ದೆಸೆಗೆಂದು ಹಳ್ಳದ ಹತ್ತಿರ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಹಳ್ಳದಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ.ಮೊದಲ ಮಗ ಮಣಿಕಂಠ ಮತ್ತು ಮೂರನೇ ಮಗ ಹರ್ಷವರ್ಧನ್ ಹಳ್ಳದಲ್ಲಿ ಮುಳುಗಿ ಮೃತಪಟ್ಟಿದ್ದರೆ, ಮಧ್ಯದ ಹುಡುಗ ಬದುಕುಳಿದ್ದಿದ್ದಾನೆ. ಘಟನೆಯು ಕುರುಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಾಲಕರ ಸಾವಿನಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.