ADVERTISEMENT

ಬಳ್ಳಾರಿ: ಖಾಸಗಿ ಬ್ಯಾಂಕ್‌ವೊಂದರ ಚಾಲ್ತಿ ಖಾತೆ ಮೇಲೆ 35 ಸೈಬರ್‌ ವಂಚನೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 0:39 IST
Last Updated 22 ಫೆಬ್ರುವರಿ 2026, 0:39 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬಳ್ಳಾರಿ: ದೇಶದ ವಿವಿಧೆಡೆ ದಾಖಲಾಗಿರುವ 35 ಆನ್‌ಲೈನ್‌ ವಂಚನೆ ಪ್ರಕರಣಗಳಲ್ಲಿ ಬಳ್ಳಾರಿ ನಗರದ ಖಾಸಗಿ ಬ್ಯಾಂಕ್‌ವೊಂದರ ಚಾಲ್ತಿ ಖಾತೆಯ ಉಲ್ಲೇಖವಿರುವುದು ಬಯಲಾಗಿದೆ.  

ರಾಜ್ಯದ ಸಿಇಎನ್ (ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ) ಠಾಣೆ ಪೊಲೀಸರು ‘ಮ್ಯೂಲ್‌ (ಯಾರ ಪರವಾಗಿಯೋ ಅಕ್ರಮವಾಗಿ ಪಡೆದ ಹಣವನ್ನು ಇನ್ಯಾರಿಗೋ ವರ್ಗಾಯಿಸುವ)’ ಖಾತೆಗಳ ಪರಿಶೀಲನೆಯಲ್ಲಿ ತೊಡಗಿದ್ದು ಈ ವೇಳೆ ಬಳ್ಳಾರಿ ಖಾತೆಯ ವಂಚನೆ ಪ್ರಕರಣಗಳ ವಿವರ ಗೊತ್ತಾಗಿದೆ.   

ADVERTISEMENT

ಖಾತೆಯು ಸಂಡೂರಿನ ತಾರಾನಗರದ ಸ್ವಾಮಿ ಎಚ್.ಎ ಸ್ಅವರಿಗೆ ಸೇರಿದ್ದು ಎಂಬುದು ತಿಳಿದಿದೆ. ವಿಚಾರಣೆ ವೇಳೆ ಅವರು, ‘ಆಂಧ್ರಪ್ರದೇಶದ ಹರಿಜನ ವಂಡ್ರಪ್ಪ ಎಂಬಾತ ₹1 ಕೋಟಿ ಸಬ್ಸಿಡಿ ಸಾಲ ಕೊಡಿಸುವ ಆಮಿಷವೊಡ್ಡಿ ‘ನಿಸ್ಸಿ ಎಂಟರ್‌ಪ್ರೈಸಸ್‌’ ಎಂಬ ಕಂಪನಿ ಹೆಸರಲ್ಲಿ 2025ರ ಮೇ 3ರಂದು ಖಾತೆ ತೆರೆಸಿದ್ದರು. ಪಾಸ್ ಬುಕ್‌, ಎಟಿಎಂ ಸೇರಿ ಎಲ್ಲ ದಾಖಲೆಗಳನ್ನೂ ಅವರೇ ಇಟ್ಟುಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ. 

ಸಾರ್ವಜನಿಕರಿಗೆ ವಂಚಿಸಲೆಂದೇ ಒಟ್ಟುಗೂಡಿ ಖಾತೆ ಮಾಡಿಸಿರುವ ಆರೋಪದಲ್ಲಿ ಇಬ್ಬರ ವಿರುದ್ಧ ಇಲ್ಲಿನ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.