ತೆಕ್ಕಲಕೋಟೆ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ಹ್ಯೂಮನ್ ಪೀಪಲ್ ಟು ಪೀಪಲ್ ಇಂಡಿಯಾ ಸಂಸ್ಥೆ, ನೇತ್ರ ಕಲಾ ಸಂಘ ಸಿರುಗುಪ್ಪ ಸಹಯೋಗದಲ್ಲಿ ಶನಿವಾರ ಸ್ತನ ಕ್ಯಾನ್ಸರ್ ಮುಕ್ತ ಭಾರತ ಕಾರ್ಯಕ್ರಮ ನಡೆಯಿತು.
ಪ್ರಾಂಶುಪಾಲ ನಾಗೇಶ್ವರರಾವ್ ಮಾತನಾಡಿ, ‘18ರಿಂದ 48 ವರ್ಷದ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಕಾಯಿಲೆಯ ಕುರಿತು ಜಾಗೃತಿ ಹೊಂದುವುದು ಮುಖ್ಯವಾಗಿದೆ. ವಿವಿಧ ಬಗೆಯ ಕ್ಯಾನ್ಸರ್‌ಗಳು ಇದ್ದರೂ ಸ್ತನ ಕ್ಯಾನ್ಸರ್ ಅಪಾಯಕಾರಿ ಆಗಿದ್ದು ತಕ್ಷಣವೇ ಈ ರೋಗದ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದಲ್ಲಿ ಸಂಪೂರ್ಣವಾಗಿ ಕಾಯಿಲೆ ಗುಣಮುಖವಾಗಬಹುದು’ ಎಂದರು.
ಇದೇ ಸಂದರ್ಭದಲ್ಲಿ ನೇತ್ರ ಕಲಾತಂಡದ ಕಲಾವಿದರಾದ ದೊಡ್ಡ ಹುಸೇನಪ್ಪ ಎಚ್.ತಿಮ್ಮಪ್ಪ, ಮುತ್ತಣ್ಣ, ಡಿ ಶಿವಪ್ಪ, ಮಮತ, ಸುಕನ್ಯ, ತಿಮ್ಮರಾಜು, ಶಂಕರ್ ಅವರು ಸ್ತನ ಕ್ಯಾನ್ಸರ್ ಮುಕ್ತ ಭಾರತ ಎಂಬ ಬೀದಿ ನಾಟಕ ನಡೆಸಿ ಜಾಗೃತಿ ಮೂಡಿಸಿದರು.
ಉಪನ್ಯಾಸಕರಾದ ಗುರುರಾಜ್, ಭಾಷಾ ಏ.ಕೆ., ಪೀಪಲ್ ಇಂಡಿಯಾ ಸಂಸ್ಥೆಯ ತಾಲ್ಲೂಕು ಕ್ಷೇತ್ರ ಕಾರ್ಯಕರ್ತರಾದ ರಜಿಯಾ ಮತ್ತು ಮಂಜುಳಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.