
ಪ್ರಜಾವಾಣಿ ವಾರ್ತೆ
ಬಳ್ಳಾರಿ: ನಗರದ ಹೊರವಲಯದ ಅಲ್ಲಿಪುರ ಬಳಿ ಕಾರೊಂದು ತುಂಗಭದ್ರಾ ಜಲಾಶಯ ಮೇಲ್ಮಟ್ಟದ ಕಾಲುವೆಯಲ್ಲಿ ಕೊಚ್ಚಿಹೋಗುರುತ್ತಿರುವ ದೃಶ್ಯವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಎರಡು ದಿನಗಳಿಂದ ಹರಿದಾಡುತ್ತಿದೆ.
ವಿಎಸ್‌ಕೆ ವಿಶ್ವವಿದ್ಯಾಲಯ ಪಕ್ಕದಲ್ಲಿ ಹಾದು ಹೋಗಿರುವ ಕಾಲುವೆಯಲ್ಲಿ ಬಿಳಿ ಬಣ್ಣದ ಕಾರು ತೇಲುತ್ತಾ ಸ್ವಲ್ಪ ದೂರ ಸಾಗಿ, ಬಳಿಕ ಮುಳುಗುವುದು ವಿಡಿಯೊದಲ್ಲಿದೆ.
‘ನೀರಿನಲ್ಲಿಕಾರು ಕೊಚ್ಚಿ ಹೋಗುತ್ತಿದ್ದಾಗ ಅದರಲ್ಲಿ ಯಾರೂ ಇರಲಿಲ್ಲ. ಕಾರನ್ನು ಮೇಲೆತ್ತಲಾಗಿದೆ’ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.