ಕಂಪ್ಲಿ: ‘ಮಕ್ಕಳ ಸಾಹಿತ್ಯ ರಚನೆ ಸುಲಭವಲ್ಲ. ಮಗುವಿನ ಅಂತಃಕರಣ, ಕಲ್ಪನೆ, ಸಂತೋಷಗಳನ್ನು ಅರಿಯದೇ ಸಾಹಿತ್ಯ ರಚಿಸಲು ಆಗುವುದಿಲ್ಲ. ತಾನು ಮಗುವಾದಾಗ ಮಕ್ಕಳ ಸಾಹಿತಿಯಾಗಿ ರೂಪುಗೊಳ್ಳಲು ಸಾಧ್ಯ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕೆ. ಶಿವಲಿಂಗಪ್ಪ ಹಂದಿಹಾಳು ತಿಳಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಶಿವಲಿಂಗಪ್ಪ ಹಂದಿಹಾಳು ಅವರ ಕೃತಿ ‘ನೋಟ್ ಬುಕ್’ ಕುರಿತು ಸಂವಾದದಲ್ಲಿ ಮಾತನಾಡಿದರು.
ಮಕ್ಕಳ ಬೆಳವಣಿಗೆಗೆ ಸಾಹಿತ್ಯ ಪೂರಕವಾಗಿರಬೇಕು. ಮಕ್ಕಳ ಸಾಹಿತ್ಯ ಮಕ್ಕಳತನ ಇರುವವರಿಗಾಗಿ ಬರೆದ ಸಾಹಿತ್ಯವಾಗಿದೆ. ಶಾಲೆ ಬಿಟ್ಟ, ಅನೌಪಚಾರಿಕ ಶಿಕ್ಷಣ ಪಡೆಯುವ ಮಕ್ಕಳಲ್ಲಿ ಸೃಜನಶೀಲ ಹೆಪ್ಪುಗಟ್ಟಿದ್ದು, ಸೂಕ್ತ ವೇದಿಕೆ ಒದಗಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ಕನ್ನಡ ಹಿತರಕ್ಷಕ ಸಂಘದ ಗೌರವ ಅಧ್ಯಕ್ಷ ಕ.ಮ. ಹೇಮಯ್ಯಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ‘ಮಕ್ಕಳ ಸಾಹಿತ್ಯವನ್ನು ಬದುಕಿನ ಪ್ರಮುಖ ಅಂಗವೆಂದು ಪರಿಗಣಿಸಬೇಕಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಪರಿಷತ್ ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ, ಕತೆಗಾರ ವೀರೇಂದ್ರ ರಾವಿಹಾಳ, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಡಿ. ಶ್ರೀಧರಶ್ರೇಷ್ಠಿ ಮಾತನಾಡಿದರು.
ಸಂವಾದದಲ್ಲಿ ಗಂಗಾವತಿಯ ಮಕ್ಕಳ ಸಾಹಿತಿ ಸುರೇಶ್ ಜಿ.ಎಸ್. ಕಲಾಪ್ರಿಯ, ಎಸ್.ಎಂ. ಸಾವಿತ್ರಿ, ಬಿ. ಸುನಿಲ್, ಜಯಶ್ರೀ ಬೇರ್ಗಿ, ಚಂದ್ರಯ್ಯ ಸೊಪ್ಪಿಮಠ, ರಾಜು ಬಿಲಂಕರ್, ವೀರಮ್ಮ ನಾಗರಾಜ, ಮುದುಕಪ್ಪ ನೆಲಜೇರಿ, ಶಂಕರಮೂರ್ತಿ ಭಾಗವಹಿಸಿದ್ದರು.
ಕಸಾಪ ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಬಡಿಗೇರ ಜಿಲಾನ್‍ಸಾಬ್, ಅಂಬಿಗರ ಮಂಜುನಾಥ, ಬಂಗಿ ದೊಡ್ಡ ಮಂಜುನಾಥ, ಎಲಿಗಾರ ವೆಂಕಟರೆಡ್ಡಿ, ಯು.ಎಂ. ವಿದ್ಯಾಶಂಕರ, ಶಾಮಸುಂದರರಾವ್, ಎಂ.ಎಸ್. ಮುನ್ನಾ, ಅಶೋಕ ಕುಕನೂರು, ಕಾಳಿಂಗವರ್ಧನ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.