ADVERTISEMENT

ಎಂ. ಸೂಗೂರು ಸಹಕಾರ ಸಂಘ: ₹ 2.48 ಲಕ್ಷ ಲಾಭ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 5:11 IST
Last Updated 21 ಸೆಪ್ಟೆಂಬರ್ 2025, 5:11 IST
   

ತೆಕ್ಕಲಕೋಟೆ: ಸಮೀಪದ ಎಂ.ಸೂಗೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 39ನೇ ಮಹಾಸಭೆ ಶನಿವಾರ ನಡೆಯಿತು.

2024-25ನೇ ಸಾಲಿಗೆ ₹ 2.48 ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಘದ ಅಧ್ಯಕ್ಷ ಎಸ್.ಎಂ. ಬಸವ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಂಘದ ಸಿಇಒ ಕೆ.ಎಂ ಮಹಾಬಲೇಶ್ವರ ಸ್ವಾಮಿ ಲೆಕ್ಕಪತ್ರ ಮಂಡಿಸಿ ಸಂಘವು 582 ಸದಸ್ಯರನ್ನು ಹೊಂದಿದೆ.

ಷೇರುಬಂಡವಾಳ 58.23 ಲಕ್ಷ, ಸಂಘದ ಉಳಿತಾಯ ₹4.85 ಲಕ್ಷ, 582 ಜನರಿಗೆ ₹4.32 ಕೋಟಿ ನೀಡಿದೆ.
ಸಂಘವನ್ನು 2024-25ನೇ ಸಾಲಿನಿಂದ ಕೇಂದ್ರ ಸರ್ಕಾರದ ನಬಾರ್ಡ್‌ ಯೋಜನೆಯಲ್ಲಿ ಇ-ಫ್ಯಾಕ್ಸ್ ಎಂದು ಘೋಷಣೆ ಮಾಡಿದೆ ಎಂದು ತಿಳಿಸಿದರು.
ಗ್ರಾಮಸ್ಥ ಬಿ.ಮಲ್ಲಿಕಾರ್ಜುನ ಮಾತನಾಡಿ ಸಂಘದ ನ್ಯಾಯಬೆಲೆ ಅಂಗಡಿಯಲ್ಲಿ ಅಡುಗೆಎಣ್ಣೆ, ಉಪ್ಪು ಸೇರಿದಂತೆ ಇತರೆ ಅಗತ್ಯ ಸಾಮಗ್ರಿಗಳನ್ನು ನೀಡಬೇಕು ಎಂದು ಮನವಿ ಸಲ್ಲಿಸಿದರು.

ADVERTISEMENT

ಉಪಾಧ್ಯಕ್ಷೆ ಕೆ.ಈರಮ್ಮ ನಿರ್ದೇಶಕರಾದ ಡಿ.ಕೆ ಪದ್ಮನಾಭರಾವು, ಕೆ.ನಾಗರಾಜಪ್ಪ, ಎಂ. ಮಾರೆಣ್ಣ, ಬಾಗೋಡಿ ಶರಣಪ್ಪ, ಎಲ್.ಪಂಪನಗೌಡ, ಜಿ.ಫಕ್ಕೀರಪ್ಪ, ಎನ್.ಹಂಪಮ್ಮ, ಹುಲುಗಪ್ಪ ಮಣ್ಣೂರು, ತಿಮ್ಮಪ್ಪ ದಮ್ಮೂರು, ಹುಲುಗಪ್ಪ, ಎನ್‌ ಬಾಲಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.