
ಕುಡತಿನಿ (ಸಂಡೂರು): ‘ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸೃಜನಾತ್ಮಕ ಕಲಿಕೆಯಿಂದ ಮಕ್ಕಳ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿಯಾಗಲು ಸಾಧ್ಯ’ ಎಂದು ಹರಗಿನಡೋಣಿ ಬಸವನಗೌಡ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪಲ್ಲೇದ ಪ್ರಭು ಹೇಳಿದರು
ಪಟ್ಟಣದ ಹರಗಿನಡೋಣಿ ಬಸವನಗೌಡ ಸಂಯುಕ್ತ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಬುಧವಾರ ನಡೆದ ದಾನಿಗಳ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
‘ಸಮಾಜದಲ್ಲಿ ದಾನಿಗಳ ಸಹಕಾರದಿಂದ ಅನುದಾನ ರಹಿತ ಶಾಲೆಗಳ ಸಂಪೂರ್ಣ ಅಭಿವೃದ್ಧಿಗೆ ಸಹಕಾರಿಯಾಗಿದೆ. ಸಮಾಜದಲ್ಲಿನ ಬಡ ಮಕ್ಕಳ ಶೈಕ್ಷಣಿಕ ಕಲಿಕೆಗೆ ದಾನಿಗಳ ಸೇವೆಯು ಅನನ್ಯವಾಗಿದ್ದು ಸಮಾಜದಲ್ಲಿನ ಇತರರಿಗೂ ಮಾದರಿಯಾಗಿದೆ’ ಎಂದರು.
ಶಾಲೆಗೆ ಭೂದಾನ ಮಾಡಿದ ದಾನಿಗಳ ಕುಟುಂಬದವರಾದ ಎಚ್.ಮಲ್ಲಿಕಾರ್ಜುನ ಗೌಡ ಅವರನ್ನು ಶಾಲಾ ಆಡಳಿತ ಮಂಡಳಿಯವತಿಯಿಂದ ಸನ್ಮಾನಿಸಲಾಯಿತು.
ಕಾಲೇಜು ಪ್ರಾಚಾರ್ಯ ಸಿ.ಮಲ್ಲಿಕಾರ್ಜುನ, ಮುಖ್ಯ ಶಿಕ್ಷಕ ಎಸ್.ಎಂ.ಸಿದ್ದೇಶ್ವರ ಸ್ವಾಮಿ, ಆಡಳಿತ ಮಂಡಳಿಯ ಸದಸ್ಯರಾದ ಸುರೇಶಯ್ಯ ಪಡೆವಪ್ಪ, ಸಣ್ಣಜಂಬಣ್ಣ, ಜಿ ವೀರನಗೌಡ ಶಿಕ್ಷಕರು ಮಕ್ಕಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.