ADVERTISEMENT

ತೆಕ್ಕಲಕೋಟೆ | ಡೆಂಗಿ ದೃಢ: ಪಟ್ಟಣದಲ್ಲಿ ಫಾಗಿಂಗ್

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 2:09 IST
Last Updated 8 ಜನವರಿ 2026, 2:09 IST
ತೆಕ್ಕಲಕೋಟೆ ಪಟ್ಟಣದಲ್ಲಿ ಡೆಂಗಿ ಜ್ವರ ಪತ್ತೆಯಾದ ಹಿನ್ನೆಲೆಯಲ್ಲಿ ಫಾಗಿಂಗ್ ಮಾಡಲಾಯಿತು
ತೆಕ್ಕಲಕೋಟೆ ಪಟ್ಟಣದಲ್ಲಿ ಡೆಂಗಿ ಜ್ವರ ಪತ್ತೆಯಾದ ಹಿನ್ನೆಲೆಯಲ್ಲಿ ಫಾಗಿಂಗ್ ಮಾಡಲಾಯಿತು   

ತೆಕ್ಕಲಕೋಟೆ: ಪಟ್ಟಣದ ಡೆಂಗಿ ಜ್ವರ ಧೃಡಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ಪಟ್ಟಣ ಪಂಚಾಯಿತಿ ಸಿಬ್ಬಂದಿ ಮನೆ ಮನೆಗೆ ತೆರಳಿ ಫಾಗಿಂಗ್ ಮಾಡಲಾಯಿತು.

ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಣಾಧಿಕಾರಿ ಬಿ.ಅನ್ನಪೂರ್ಣ ಮಾತನಾಡಿ, ‘14ನೇ ವಾರ್ಡಿನ 3 ವರ್ಷದ ಮಗುವಿಗೆ ಡೆಂಗಿ ಜ್ವರ ದೃಢಗೊಂಡ ಬಗ್ಗೆ ಆಶಾಕಾರ್ಯಕರ್ತೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಮನೆ ಮನೆಗೆ ತೆರಳಿ ಫಾಗಿಂಗ್ ಕಾರ್ಯ ನಡೆಸುತ್ತಿದ್ದೇವೆ’ ಎಂದು ಹೇಳಿದರು.

ಡೆಂಗಿ ಧೃಡಗೊಂಡ ಬಸರೆಕಟ್ಟೆ ಸುತ್ತಲಿನ ನೂರು ಮನೆಗಳ ಒಳಾಂಗಣ ಹಾಗೂ ಸಾರ್ವಜನಿಕ ಕಟ್ಟೆ, ಚರಂಡಿ ತಿಪ್ಪೆಗುಂಡಿ ಪ್ರದೇಶಗಳಲ್ಲಿ ಫಾಗಿಂಗ್ ಮಾಡಿ ಸಾರ್ವಜನಿಕರಿಗೆ ಸ್ವಚ್ಛತೆ ಕುರಿತು ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

ADVERTISEMENT

ತೆಕ್ಕಲಕೋಟೆ, ಉಪ್ಪಾರ ಹೊಸಳ್ಳಿ ಹಾಗೂ ಬಲಕುಂದಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಡೆಂಗಿ ಪ್ರಕರಣ ದಾಖಲಾಗಿದ್ದರೂ, ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಯಾವುದೇ ಪರಿಶೀಲನೆ ನಡೆಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣ ಪಂಚಾಯಿತಿ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.