ADVERTISEMENT

ಕಾನಹೊಸಹಳ್ಳಿ: ದುಷ್ಕರ್ಮಿಗಳಿಂದ ವಿಗ್ರಹ ಭಗ್ನ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 13:59 IST
Last Updated 3 ಏಪ್ರಿಲ್ 2024, 13:59 IST
<div class="paragraphs"><p>3ಕೆಎಚ್ ಎಲ್ -1: ಕಾನಹೊಸಹಳ್ಳಿ ಸಮೀಪದ ಮಾಡ್ಲಾಕನಹಳ್ಳಿ ಹೊರವಲಯದಲ್ಲಿರುವ ಮಲಿಯಮ್ಮ ದೇವಸ್ಥಾನದ ವಿಗ್ರಹವನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ..</p></div>

3ಕೆಎಚ್ ಎಲ್ -1: ಕಾನಹೊಸಹಳ್ಳಿ ಸಮೀಪದ ಮಾಡ್ಲಾಕನಹಳ್ಳಿ ಹೊರವಲಯದಲ್ಲಿರುವ ಮಲಿಯಮ್ಮ ದೇವಸ್ಥಾನದ ವಿಗ್ರಹವನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ..

   

ಕಾನಹೊಸಹಳ್ಳಿ: ಸಮೀಪದ ಮಾಡ್ಲಾಕನಹಳ್ಳಿಯ ಹೊರವಲಯದಲ್ಲಿರುವ ಮಲಿಯಮ್ಮ ದೇವಿಯ ದೇವಸ್ಥಾನದಲ್ಲಿದ್ದ ವಿಗ್ರಹವನ್ನು ದುಷ್ಕರ್ಮಿಗಳು ಭಗ್ನಗೊಳಿಸಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ನಿಧಿಗಾಗಿ ದೇವಸ್ಥಾನದಲ್ಲಿರುವ ದೇವರ ಮೂರ್ತಿಯನ್ನು ಭಗ್ನಗೊಳಿಸಲಾಗಿದೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಮಲಿಯಮ್ಮ ದೇವಸ್ಥಾನಕ್ಕೆ ಕಂಚೋಬನಹಳ್ಳಿ, ಚಿಕ್ಕೋಬನಹಳ್ಳಿ, ನೆಲಬೊಮ್ಮನಹಳ್ಳಿ, ಗೆದ್ದಲಗಟ್ಟೆ ಹಾಗೂ ಜಿಲ್ಲೆ, ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಜಗಳೂರಿನಿಂದಲೂ ಅಪಾರ ಭಕ್ತರು ಬಂದು ಹೋಗುತ್ತಿದ್ದರು.

ADVERTISEMENT

ದೇವರ ವಿಗ್ರಹ ಭಗ್ನಗೊಳಿಸಿರುವ ಮಾಹಿತಿ ತಿಳಿಯುತ್ತಿದ್ದಂತೆ ಕೊಟ್ಟೂರು ಪಿಎಸ್‌ಐ ವೆಂಕಟಸ್ವಾಮಿ, ಕಾನಹೊಸಹಳ್ಳಿ ಠಾಣೆ ಅಪರಾಧ ವಿಭಾಗದ ಪಿಎಸ್‌ಐ ನಾಗರಾಜ ಸೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.