ADVERTISEMENT

ದೇವರಗಟ್ಟ ಬನ್ನಿ ಉತ್ಸವದಲ್ಲಿ ಘರ್ಷಣೆ: ಇಬ್ಬರು ಸಾವು, 100 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 5:19 IST
Last Updated 3 ಅಕ್ಟೋಬರ್ 2025, 5:19 IST
<div class="paragraphs"><p>ಕೋಲುಗಳಿಂದ ಹೊಡೆದಾಡಿಕೊಂಡ ಭಕ್ತರು</p></div>

ಕೋಲುಗಳಿಂದ ಹೊಡೆದಾಡಿಕೊಂಡ ಭಕ್ತರು

   

– ಪಿಟಿಐ

ಸಿರುಗುಪ್ಪ(ಬಳ್ಳಾರಿ ಜಿಲ್ಲೆ): ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಹೊಳಗುಂದ ಮಂಡಲದ ದೇವರಗಟ್ಟದ ಮಾಳ ಮಲ್ಲೇಶ್ವರ ಸ್ವಾಮಿ ಬನ್ನಿ ಉತ್ಸವ ಸಂದರ್ಭದಲ್ಲಿ ಅಕ್ಕಪಕ್ಕದ ಗ್ರಾಮಸ್ಥರ ನಡುವೆ ಘರ್ಷಣೆ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ನೂರು ಜನರಿಗೆ ಗಾಯಗಳಾಗಿವೆ.

ADVERTISEMENT

ಗುರುವಾರ ಮಧ್ಯರಾತ್ರಿ ಮಲ್ಲೇಶ್ವರ ಸ್ವಾಮಿ ಮತ್ತು ಮಾಳಮ್ಮ ದೇವಿಯ ಕಲ್ಯಾಣೋತ್ಸವ ನಂತರ ರಾಜಬೀದಿಯಲ್ಲಿ ಚೈತ್ರಯಾತ್ರೆ ನಡೆಸಲಾಯಿತು.

ದೇವರ ವಿಗ್ರಹಗಳನ್ನು ತೆಗೆದುಕೊಂಡು ಹೋಗಲು ಎರಡು ಗುಂಪುಗಳು ಪೈಪೋಟಿ ನಡೆಸಿದವು. ಈ ಪ್ರಕ್ರಿಯೆಯಲ್ಲಿ ಕೋಲುಗಳಿಂದ ಹೊಡೆದಾಟ ನಡೆಯಿತು. ಇದರ ಪರಿಣಾಮವಾಗಿ ಇಬ್ಬರು ಭಕ್ತರು ಮೃತಪಟ್ಟರು. 100 ಜನರು ಗಾಯಗೊಂಡರು. ಈ ಪೈಕಿ ಐವರು ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆದವನಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕರ್ನೂಲ್ ಜಿಲ್ಲೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.