ಸಿರುಗುಪ್ಪ: ತಾಲ್ಲೂಕಿನ ಬಾಗೇವಾಡಿ ಗ್ರಾಮದಲ್ಲಿನ ಸಾರ್ವಜನಿಕ ಗ್ರಂಥಾಲಯಕ್ಕೆ ಇದೇ ಗುರುವಾರ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡುತ್ತಿದ್ದು, ಎಲ್ಲರ ಗಮನ ಸೆಳೆದಿದೆ.
‘ಡಿಜಿಟಲ್ ಅರಿವು ಕೇಂದ್ರ’ವಾಗಿರುವ ಈ ಗ್ರಂಥಾಲಯ ಹಲವು ವಿಶೇಷತೆಗಳನ್ನ ಒಳಗೊಂಡಿದೆ. ಪ್ರಶಾಂತ ವಾತಾವರಣದ, ಓದುಗರಿಗೆ ಹೇಳಿ ಮಾಡಿಸಿದ ಕೇಂದ್ರ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ.
ಈ ಅರಿವು ಕೇಂದ್ರದಲ್ಲಿ ಐದು 5800ಕ್ಕೂ ಹೆಚ್ಚು ವಿವಿಧ ಪುಸ್ತಕಗಳು ಸಂಗ್ರವಾಗಿವೆ. ಅಬಾಲವೃದ್ಧರಾದಿಯಾಗಿ ಎಲ್ಲರ ಅಭಿರುಚಿಗೆ ತಕ್ಕ ಜ್ಞಾನ ಸಂಪತ್ತುನ್ನು ತನ್ನ ಒಳಲಲ್ಲಿ ಇಟ್ಟುಕೊಂಡಿರುವ ಗ್ರಂಥಾಲಯ, ಓದುವ ಆಕರ್ಷಣೆಯ ಕೇಂದ್ರವಾಗಿ ನಿರ್ಮಾಣವಾಗಿದೆ.
ಕಥೆ, ಕಾದಂಬರಿ, ಅಲ್ಲದೆ ಮಾಸ ಪತ್ರಿಕೆಗಳು, ಸ್ಪಧಾರ್ತ್ಮ ಪುಸ್ತಕಗಳೊಂದಿಗೆ ದಿನ ನಿತ್ಯ ಎರಡು ಭಾಷೆಯ ಪತ್ರಿಕೆಗಳು ದೊರೆಯುತ್ತವೆ. ಕಂಪ್ಯೂಟರ್ ವ್ಯವಸ್ಥೆಯೂ ಇದ್ದು, ಅದರಲ್ಲಿ ಡಿಜಿಟಲ್ ಸೌಲಭ್ಯ ಏರ್ಪಡಿಸಲಾಗಿದೆ. ಮುದ್ರಣ ಹಾಗೂ ಡಿಜಿಟಲ್ ಸೌಲಭ್ಯದ ಮೂಲಕ ಸ್ಪರ್ಧಾತ್ಮಕ ಜ್ಞಾನವನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಜಿಲ್ಲಾ ಪಂಚಾಯತಿ ಅನುದಾನದಡಿ ಸುಸಜ್ಜಿತ ಕಟ್ಟವನ್ನು ನಿರ್ಮಾಣ ಮಾಡಲಾಗಿದ್ದು, ಕೇಂದ್ರದಲ್ಲಿ ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗಿದೆ. ಓದುಗರಿಗೆ ಬೇಕಾದ ಪ್ರಶಾಂತ ವಾತಾವರಣ, ಶುದ್ದಕುಡಿಯುವ ನೀರಿನ ಘಟಕ, ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೆಕ ಶೌಚಾಲಯ ವ್ಯವಸ್ಥೆ, ಮೆಟ್ಟಿಲು ಹತ್ತಲು ಸಾಧ್ಯವಾಗದ ಹಿರಿಯರಿಗೆ ವಿಲ್ ಚೇರ್, ವಿದ್ಯುತ್ ಗಾಳಿ ಮತ್ತು ಬೆಳಕು ಹಾಗೂ ಪ್ರತಿಯೊಬ್ಬರಿಗೆ ಪ್ರತೇಕ ಆಸನ ವ್ಯವಸ್ಥೆ ಮಾಡಿರುವುದರಿಂದ ಓದುಗರಿಗೆ ಹೇಳಿ ಮಾಡಿಸಿದ ವಾತಾವರಣ ಸೃಷ್ಟಿಸಲಾಗಿದೆ.
ಬರೀ ಪುಸ್ತಕಗಳು ಅಲ್ಲದೆ ಚೆಸ್ ಸೇರಿದಂತೆ ಆಟಿಕೆ ಸಾಮಾಗ್ರಿಗಳು ಹಾಗೂ ಕಲಿಕಾ ಸಾಮಾಗ್ರಿಗಳು ಈ ಕೇಂದ್ರದಲ್ಲಿ ಲಭ್ಯವಿದೆ. ಚಿಕ್ಕ ಮಕ್ಕಳು, ಹಿರಿಯರು ಸೇರಿ ನಿತ್ಯ ತಮಗೆ ಇಷ್ಟವಾದ ಪುಸ್ತಕಗಳನ್ನು ತೆಗೆದುಕೊಂಡು ಓದುತ್ತಾರೆ.
ವಿಶೇಷ ದಿನಗಳಲ್ಲಿ ಪ್ರೋಜಕ್ಟರ್ ಮೂಲಕ ವಿಷಯಗಳನ್ನು ತೋರಿಸುವ ರೂಢಿಯು ಇಲ್ಲಿದೆ. ಅಲ್ಲದೆ ಸಾಧಕರ ಭಾವಚಿತ್ರಗಳು ಓದುಗರರಿಗೆ ಸ್ಪೂರ್ತಿ ನೀಡುವಂತೆ ಅಳವಡಿಸಲಾಗಿದೆ. ಗ್ರಂಥಾಲಯಕ್ಕೆ 276 ನೋಂದಾಯಿತ ಸದಸ್ಯರಾಗಿದ್ದು, ನಿತ್ಯ 100 ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಓದಲು ಬರುತ್ತಿದ್ದಾರೆ.
ಗ್ರಾಮೀಣ ಭಾಗದ ಜನರಿಗೆ ಸಾಮಾನ್ಯ ಜ್ಞಾನವನ್ನು ತಿಳಿಸಿಕೊಡುವ ಅರಿವು ಕೇಂದ್ರವಾಗಿ ಗ್ರಂಥಾಲಯವನ್ನು ನಿರ್ಮಿಸಲಾಗಿದೆ. ಇದಕ್ಕೆ ಉತ್ತಮ ಅಭಿಪ್ರಯ ವ್ಯಕ್ತವಾಗಿದ್ದು ಇನ್ನೂ ಹೆಚ್ಚು ಕೆಲಸ ಮಾಡಲು ಸ್ಪೂರ್ತಿ ತಂದಿದೆಪವನ ಕುಮಾರ, ಸಿರುಗುಪ್ಪ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.