ADVERTISEMENT

ಕಣ್ಮನ ಸೆಳೆದ ಕರಕುಶಲ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 10:24 IST
Last Updated 10 ಜನವರಿ 2021, 10:24 IST
ಹೊಸಪೇಟೆಯಲ್ಲಿ ಭಾನುವಾರ ಆಯೋಜಿಸಿದ್ದ ಕರಕುಶಲ ವಸ್ತುಗಳ ಪ್ರದರ್ಶನದಲ್ಲಿ ಗಮನ ಸೆಳೆದ ಚರ್ಮವಾದ್ಯಗಳು
ಹೊಸಪೇಟೆಯಲ್ಲಿ ಭಾನುವಾರ ಆಯೋಜಿಸಿದ್ದ ಕರಕುಶಲ ವಸ್ತುಗಳ ಪ್ರದರ್ಶನದಲ್ಲಿ ಗಮನ ಸೆಳೆದ ಚರ್ಮವಾದ್ಯಗಳು   

ಹೊಸಪೇಟೆ: ಸ್ಥಿರಾ ಸಂಸ್ಥೆ ಬಳ್ಳಾರಿ ಹಾಗೂ ವಾತ್ಸಲ್ಯ ಟ್ರಸ್ಟ್‌ ಸಹಭಾಗಿತ್ವದಲ್ಲಿ ಭಾನುವಾರ ನಗರದ ಅನಂತಶಯನಗುಡಿಯಲ್ಲಿ ಹಮ್ಮಿಕೊಂಡಿದ್ದ ಗೃಹ ಉದ್ಯಮ, ಕರಕುಶಲ ವಸ್ತುಗಳ ಪ್ರದರ್ಶನ ಕಣ್ಮನ ಸೆಳೆಯಿತು.

ಉಪ್ಪಿನ ಕಾಯಿ, ಕಿರು ಒಣತಿಂಡಿ, ಕೈಚೀಲ, ಸಂಸ್ಕರಿಸಿ ಕೃಷಿ ಉತ್ಪನ್ನ, ರೊಟ್ಟಿ, ಬತ್ತಿ, ಹೋಳಿಗೆ, ಸಿರಿಧಾನ್ಯಗಳು, ಚರ್ಮವಾದ್ಯಗಳು ಪ್ರದರ್ಶನದಲ್ಲಿ ಗಮನ ಸೆಳೆದವು.

ಹಳೆ ಮಲಪನಗುಡಿಯ ಕುರಿ ಉಣ್ಣೆ ಉತ್ಪನ್ನ, ಚೈತನ್ಯ ಸಂಘ, ಮಹಿಳಾ ಉಪ ಸಮಿತಿ ಗೃಹ ಉತ್ಪನ್ನ, ರೇಣುಕಾ ಗ್ರಾಮೀಣಾಭಿವೃದ್ಧಿ ಕೇಂದ್ರ ಮಹಿಳಾ ಗೃಹೋದ್ಯಮಿ ಉತ್ಪನ್ನಗಳು, ವಾತ್ಸಲ್ಯ ಟ್ರಸ್ಟ್ ಶಾಲಾ ಮಕ್ಕಳು ತಯಾರಿಸಿದ ಕರಕುಶಲ ವಸ್ತುಗಳನ್ನು ಇರಿಸಲಾಗಿತ್ತು.

ADVERTISEMENT

ಹಳೆ ಮಲಪನಗುಡಿಯ ಕುರಿ ಉಣ್ಣೆ ಉತ್ಪನ್ನದ ಸುಭದ್ರಮ್ಮ ಕಾರಮಂಚಪ್ಪ ಉದ್ಘಾಟಿಸಿದರು. ಸ್ಥಿರಾ ಸಂಸ್ಥೆಯ ಬಿ. ರೇಣುಕಾ, ಸಾವಿತ್ರಮ್ಮ, ರಾಜೇಶ್ವರಿ, ಮಲ್ಲಮ್ಮ, ಭಾಗ್ಯ, ವಾತ್ಸಲ್ಯ ಟ್ರಸ್ಟ್‌ನ ಯಶಸ್ವಿನಿ, ವೆಂಕಾಪುರ ಕ್ಯಾಂಪ್ ರಾಮದೇವಿ, ರೇಣುಕಾ ಗ್ರಾಮೀಣಾಭಿವೃದ್ಧಿ ಕೇಂದ್ರದ ಪ್ರೇಮಾ, ಸರಸ್ವತಿ, ಉಮಾದೇವಿ, ಗೀತಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.