ADVERTISEMENT

ಜನ್ಮದಿನಕ್ಕೆ ನೂರು ಮಾಸ್ಕ್‌ ವಿತರಿಸಿದ ಬಾಲೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 7:15 IST
Last Updated 30 ಮಾರ್ಚ್ 2020, 7:15 IST
   

ಹೊಸಪೇಟೆ: ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದ ಜೆ.ವಿ. ವರ್ಷಾ ತನ್ನ ಒಂಬತ್ತನೇ ವರ್ಷದ ಜನ್ಮದಿನದ ಪ್ರಯುಕ್ತ ಸೋಮವಾರ ಗ್ರಾಮದಲ್ಲಿ ನೂರು ಮಾಸ್ಕ್‌ಗಳನ್ನು ವಿತರಿಸಿದರು.

ಮನೆಯಲ್ಲೇ ದೇವರಿಗೆ ಪೂಜೆ ಸಲ್ಲಿಸಿ, ಸರಳವಾಗಿ ಜನ್ಮದಿನ ಆಚರಿಸಿಕೊಂಡ ವರ್ಷಾ, ನಂತರ ಗ್ರಾಮದಲ್ಲಿ ಸುತ್ತಾಡಿ ನೂರು ಮಾಸ್ಕ್‌ಗಳನ್ನು ವಿತರಿಸಿದರು. ‘ಎಲ್ಲೆಡೆ ಕೊರೊನಾ ಸೋಂಕು ಹರಡುತ್ತಿದೆ. ಯಾರೂ ಮನೆಯ ಹೊರಗೆ ಓಡಾಡಬಾರದು. ಸ್ವಚ್ಛತೆಯಿಂದ ಇರಬೇಕು’ ಎಂದು ಗ್ರಾಮಸ್ಥರಿಗೆ ವರ್ಷಾ ಹೇಳಿದಳು. ಈ ವೇಳೆ ಮಾಸ್ಕ್‌ ಪಡೆದ ಗ್ರಾಮಸ್ಥರು ವರ್ಷಾಳನ್ನು ಹರಸಿ, ಆಕೆಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ವರ್ಷಾ ಅವರ ತಂದೆ ವೀರಭದ್ರ ಅವರು ‘ಪ್ರಜಾವಾಣಿ’ ಏಜೆಂಟ್‌ರಾಗಿದ್ದು, ಇಂತಹ ಪರಿಸ್ಥಿತಿಯಲ್ಲೂ ಜನರ ಮನೆ ಮನೆಗೂ ಪತ್ರಿಕೆಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.