
ಹರಪನಹಳ್ಳಿ: ತಾಲ್ಲೂಕು ಕ್ರೀಡಾಂಗಣದ ಬಳಿಯಿರುವ ಡಾ. ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಸ್ವಚ್ಛ ಭಾರತ್ ಮಿಷನ್ ಅಭಿಯಾನ 2.0 ಅಡಿಯಲ್ಲಿ ನಗರಸಭೆ ಆಯೋಜಿಸಿದ್ದ ‘ಕಸದಿಂದ ರಸ’ ವಸ್ತು ಪ್ರದರ್ಶನ ಗಮನ ಸೆಳೆಯಿತು.
ಕೆಸಿಐ ಆಂಗ್ಲ ಮಾಧ್ಯಮ ಶಾಲೆ, ಸರ್ಕಾರಿ ಪ್ರೌಢಶಾಲೆ, ಟಿಎಂಎಇ ಪ್ರೌಢಶಾಲೆ, ವೀವಿಎಸ್ ಪ್ರೌಢಶಾಲೆ ಸೇರಿ ಒಟ್ಟು 10 ಶಾಲೆಗಳಿಂದ ಶಾಲಾ ಮಕ್ಕಳು 60ಕ್ಕೂ ಹೆಚ್ಚು ಮಾದರಿಗಳನ್ನು ತಯಾರಿಸಿ ವಸ್ತು ಪ್ರದರ್ಶನದಲ್ಲಿ ಸರ್ಧೆಗಿಟ್ಟಿದ್ದರು. ಪ್ಲಾಸ್ಟಿಕ್ ಬಾಟಲ್ ಮತ್ತು ಕೋಲುಗಳನ್ನು ಬಳಸಿ ಜಲ ವಿದ್ಯುತ್ ಚಕ್ರ, ಕನ್ನಡಿ, ಜ್ವಾಲಾಮುಖಿ, ಬೋನ್ಸಾಯ್ ಮರ, ಅಲಂಕಾರಿಕ ದೀಪ ಸೇರಿ ಹಲವು ಮಾದರಿಗಳು ಗಮನ ಸೆಳೆದವು.
ಟಿಎಂಎಇ ಪ್ರೌಢಶಾಲೆ ಪ್ರಥಮ, ಕೆಸಿಎ ಆಂಗ್ಲ ಪ್ರೌಢಶಾಲೆ ದ್ವಿತಿಯ, ಸರ್ಕಾರಿ ಜ್ಯೂನಿಯರ್ ಕಾಲೇಜ್ ತೃತೀಯಸ್ಥಾನ ಬಹುಮಾನ ಪಡೆದರು. ಪ್ರಭಾರ ಪೌರಾಯುಕ್ತೆ ರೇಣುಕಾ ಎಸ್.ದೇಸಾಯಿ, ಎಂಜಿನಿಯರ್ ಅಮರೇಶ್, ಶಿಕ್ಷಣ ಸಂಯೋಜಕರಾದ ಪಂಪಾನಾಯ್ಕ, ಲತಾ ರಾಥೋಡ್, ಆರೋಗ್ಯ ನಿರೀಕ್ಷಕ ಮಂಜುನಾಥ, ಲೆಕ್ಕಶಾಖೆ ಹನುಮೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.