
ಉಗ್ರನರಸಿಂಹೇಗೌಡ
ಬಳ್ಳಾರಿ: ‘ಸಂಡೂರಿನಲ್ಲಿ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ನಡೆಸಲು ಉದ್ದೇಶಿಸಿರುವ ‘ದೇವದಾರಿ ಗಣಿ’ಯನ್ನು ಯಾವುದೇ ಕಾರಣಕ್ಕೂ ನೀಡಬಾರದು’ ಎಂದು ಸರ್ವೋದಯ ಕರ್ನಾಟಕದ ಉಗ್ರನರಸಿಂಹೇಗೌಡ ಆಗ್ರಹಿಸಿದರು.
‘ಗಣಿಗಾರಿಕೆಗೆ ಸ್ಥಳೀಯರ ವಿರೋಧವಿದೆ. ನಾವು ಅವರ ಪರ ಇದ್ದೇವೆ. ಗಣಿಗಾರಿಕೆಯಿಂದ ಸಂಡೂರಿನಲ್ಲಿ ಲಾರಿ ಚಾಲಕ ಮತ್ತು ಕ್ಲೀನರ್ ಕೆಲಸ ಸಿಗುವುದೇ ಹೊರತು ಬೇರೆ ಉದ್ಯೋಗ ಸಿಗಲ್ಲ’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರೇ ಅರಣ್ಯ ನಾಶಕ್ಕೆ ಮುಂದಾಗಿದ್ದಾರೆ. ದೇವದಾರಿ ಗಣಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಅಕ್ರಮವಾಗಿ ಪ್ರಮಾಣ ಪತ್ರ ನೀಡಲಾಗಿದೆ. ಇದರ ತನಿಖೆ ಆಗಬೇಕು’ ಎಂದರು.
‘ಸಂಡೂರಿನಲ್ಲಿ ಸದ್ಯ ವಾರ್ಷಿಕ 50 ದಶಲಕ್ಷ ಟನ್ ಅದಿರು ಉತ್ಪಾದನೆ ಆಗುತ್ತಿದೆ. ಅದನ್ನು 20 ದಶಲಕ್ಷ ಟನ್‌ಗೆ ಇಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಉನ್ನತಾಧಿಕಾರ ಸಮಿತಿ ಸಲ್ಲಿಸಿದ ಶಿಫಾರಸಿನಲ್ಲಿ ಉಲ್ಲೇಖವಿದೆ. ಹೀಗಿದ್ದ ಮೇಲೆ ಅರಣ್ಯ ಪ್ರದೇಶದಲ್ಲಿ ಹೊಸ ಗಣಿ ಯಾಕೆ ಬೇಕು’ ಎಂದು ಅವರು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.