ಹೂವಿನಹಡಗಲಿ: ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮಿರಾಕೊರನಹಳ್ಳಿ ನಾಗತಿಬಸಾಪುರ ಮಾರ್ಗ ಮಧ್ಯೆ ಸೋಮವಾರ ಪೊಲೀಸರೆಂದು ಹೇಳಿಕೊಂಡು ಬೈಕ್ ಅಡ್ಡಗಟ್ಟಿದ ಇಬ್ಬರು ಅಪರಿಚಿತರು ₹30 ಸಾವಿರ ಕಸಿದುಕೊಂಡು ಪರಾರಿಯಾಗಿದ್ದಾರೆ.
ತಾಲ್ಲೂಕಿನ ಮಾನ್ಯರಮಸಲವಾಡ ಗ್ರಾಮದ ರೈತ ಗದುಗಿನ ರಾಜಶೇಖರಪ್ಪ ಹಣ ಕಳೆದುಕೊಂಡವರು. ತಮ್ಮ ಟ್ರ್ಯಾಕ್ಟರ್‌ಗೆ ಟೈಯರ್‌ಗಳನ್ನು ಖರೀದಿಸಲು ಅವರು ಪಟ್ಟಣಕ್ಕೆ ಬರುತ್ತಿದ್ದಾಗ ಬೈಕ್‌ನಲ್ಲಿ ಬಂದ ಕದೀಮರು ತಾವು ಪೊಲೀಸರೆಂದು ಹೇಳಿಕೊಂಡು ರಾಜಶೇಖರಪ್ಪ ಅವರ ಬೈಕ್ ಅಡ್ಡಗಟ್ಟಿದ್ದಾರೆ.
‘ಗಾಂಜಾ ಸಾಗಣೆ ಮಾಹಿತಿ ಬಂದಿದೆ, ಹಾಗಾಗಿ ನಿಮ್ಮನ್ನು ತಪಾಸಣೆ ಮಾಡಬೇಕು’ ಎಂದಿದ್ದಾರೆ. ಶೋಧದ ನೆಪದಲ್ಲಿ ರೈತನ ಜೇಬಿನಲ್ಲಿದ್ದ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.