ADVERTISEMENT

ಹೊಸಪೇಟೆ: ಬೃಹತ್ ಉದ್ಯೋಗ ಮೇಳ 21ಕ್ಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 2:53 IST
Last Updated 10 ಫೆಬ್ರುವರಿ 2026, 2:53 IST
<div class="paragraphs"><p>ಉದ್ಯೋಗ</p></div>

ಉದ್ಯೋಗ

   

ಪ್ರಜಾವಾಣಿ ವಾರ್ತೆ

ಹೊಸಪೇಟೆ(ವಿಜಯನಗರ): ನಗರದ ವಿಜಯನಗರ ಕಾಲೇಜಿನಲ್ಲಿ ಫೆ. 21ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, 50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದರು.

ADVERTISEMENT

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉದ್ಯೋಗ ಮೇಳದಲ್ಲಿ ರಾಜ್ಯದ ವಿವಿಧ ಪ್ರತಿಷ್ಠಿತ 50ಕ್ಕೂ ಹೆಚ್ಚು ಎಂಎನ್ಸಿ ಕಂಪನಿಗಳು ಭಾಗವಹಿಸಲಿವೆ. 35ವರ್ಷ ಒಳಗಿನ ಎಸ್.ಎಸ್.ಎಲ್.ಸಿ. ಪಿಯು, ಐಟಿಐ, ಡಿಪ್ಲೊಮಾ, ನರ್ಸಿಂಗ್, ಎಂಜಿನಿಯರಿಂಗ್, ಬಿಕಾಂ, ಬಿಎಸ್‌ಸಿ, ಬಿಎ, ಬಿಬಿಎ, ಬಿಎಚ್ ಎಂ, ಎಂಕಾಂ, ಎಂಬಿಎ, ಎಂಎಸ್‌ಸಿ, ಎಂಎ ಪದವಿ ಹೊಂದಿದವರು ಈ ಮೇಳದಲ್ಲಿ ಭಾಗವಹಿಸಬಹುದು ಎಂದರು. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ನಗರದ ವಿಜಯನಗರ ಕಾಲೇಜು ಅಥವಾ ಮೊ. 7975278783, 9986779624 ಸಂಖ್ಯೆ ಸಂಪರ್ಕಿಸಬಹುದು. ಜಿಲ್ಲಾ ಪಂಚಾಯಿತಿ ಸಿಇಒ ಮಹ್ಮದ್ ಅಲಿ ಅಕ್ರಂ ಷಾ, ವಿಜಯನಗರ ಕಾಲೇಜು ಅಧ್ಯಕ್ಷ ಮೆಟ್ರಿ ಮಲ್ಲಿಕಾರ್ಜುನ, ಪ್ರಾಚಾರ್ಯ ಎ.ಮಹಾಂತೇಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.