
ಹೂವಿನಹಡಗಲಿ: ‘ಶಾಲಾ ಹಂತದಲ್ಲೇ ಮಕ್ಕಳಿಗೆ ಸಾಹಿತ್ಯ ಓದುವ, ಬರೆಯುವ ಹವ್ಯಾಸ ಬೆಳೆಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ ಪೂಜಾರ್ ಹೇಳಿದರು.
ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಮಂಗಳವಾರ ಸಿಂಚನ ಪ್ರಕಾಶನ, ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗ ಮೇ ಸಾಹಿತ್ಯ ಮೇಳ ಸಹಯೋಗದಲ್ಲಿ ಕವಿ, ಮುಖ್ಯ ಶಿಕ್ಷಕ ಸುರೇಶ ಅಂಗಡಿ ಅವರ ಮಕ್ಕಳ ಪದ್ಯಗಳು ‘ಗಾಳಿಪಟ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕನ್ನಡ ಮೇರು ಸಾಹಿತಿಗಳ ಹೊತ್ತಿಗೆಗಳನ್ನು ಮಕ್ಕಳು ಓದಬೇಕು. ಮಕ್ಕಳು ಇಷ್ಟಪಟ್ಟು ಓದುವ ನಿಟ್ಟಿನಲ್ಲಿ ಗಾಳಿಪಟದಲ್ಲಿ ಕವಿತೆಗಳು ಮೂಡಿ ಬಂದಿವೆ ಎಂದು ತಿಳಿಸಿದರು.
ಸಾಹಿತಿ ಶಾಂತಮೂರ್ತಿ ಬಿ. ಕುಲಕರ್ಣಿ ಕೃತಿ ಪರಿಚಯಿಸಿ, ‘ಮಕ್ಕಳ ಭಾವನೆಗಳನ್ನು ಕವಿ ನವಿರಾಗಿ ಗಾಳಿಪಟದಲ್ಲಿ ಅನಾವರಣಗೊಳಿಸಿದ್ದಾರೆ. ಸತ್ಯ ಶೋಧನೆಯ ಶಕ್ತಿ ಕಾವ್ಯಗಳಿದ್ದು, ಕವಿಗಳು ಸತ್ಯದ ಆರಾಧಕರು’ ಎಂದು ಬಣ್ಣಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೊಟ್ರಗೌಡ ಮಾತನಾಡಿ, ‘ಪುಸ್ತಕಗಳಿಂದ ಸಾಮಾಜಿಕ ಬದಲಾವಣೆ ಸಾಧ್ಯವಿದ್ದು, ಶಿಕ್ಷಕರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆ’ ಎಂದರು. ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಂ.ಕಾಂತೇಶ, ಮಲ್ಲಿಗೆ ಪ್ರಕಾಶನದ ಎಲ್. ಖಾದರಬಾಷಾ ಮಾತನಾಡಿದರು.
ಸಾಹಿತಿ ಇಸ್ಮಾಯಿಲ್ ಯಲಿಗಾರ, ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ, ಗ್ರಂಥಪಾಲಕ ನಾರಾಯಣ ದಾಸ್, ಚುಸಾಪ ಅಧ್ಯಕ್ಷ ನಾಗರಾಜ ಮಲ್ಕಿಒಡೆಯರ್, ಸಿಂಚನ ಪ್ರಕಾಶನದ ಸವಿತಾ ಅಂಗಡಿ, ಟಿ.ಎಂ.ನಾಗಭೂಷಣ, ಶಿಕ್ಷಕರಾದ ಕೆ.ಬಸವರಾಜ, ಆರ್.ಸ್ವಾಮಿನಾಥ, ಜಿ.ಆನಂದ, ಪಿ.ಎಂ.ಗೀತಾ, ಪ್ರತಿಮಾ, ರೇಖಾ, ಸಂಗಮೇಶ ಸುಂಕದ ಪ್ರಸಾದ, ಸಂತೋಷ ಕುಮಾರ್, ಎಸ್.ರಾಕೇಶ ರೆಡ್ಡಿ ಇದ್ದರು.
ಪುಸ್ತಕ ಮಾಹಿತಿ
ಪುಸ್ತಕ : ಗಾಳಿಪಟ
ಪ್ರಕಾಶನ : ಸಿಂಚನ ಪ್ರಕಾಶನ
ಲೇಖಕರು : ಸುರೇಶ ಅಂಗಡಿ
ಪುಟಗಳು : 88
ಬೆಲೆ : ₹ 120
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.