
ಹೂವಿನಹಡಗಲಿ: ತಾಲ್ಲೂಕಿನ ಹರವಿ, ಹಿರೇಬನ್ನಿಮಟ್ಟಿ ಗ್ರಾಮದ ಬಳಿ ತುಂಗಭದ್ರಾ ನದಿ ತೀರದಲ್ಲಿ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ತಂಡದ ಮೇಲೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ, ಮರಳು ತುಂಬಿದ ಎರಡು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಹಿರೇಬನ್ನಿಮಟ್ಟಿ ನದಿ ತೀರದಲ್ಲಿ ಮರಳು ತುಂಬಿ ಸಾಗಣೆ ಮಾಡುತ್ತಿದ್ದ ಸ್ವರಾಜ್ ಮಜ್ಡಾ ಲಾರಿ ಮತ್ತು ₹18,480 ಬೆಲೆಯ 6 ಟನ್ ಮರಳು ಜಪ್ತಿ ಮಾಡಿದ್ದಾರೆ. ಚಾಲಕ ಹನುಮಂತಪ್ಪ ಕುಷ್ಠಗಿ ಹಾಗೂ ಲಾರಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಹರವಿ ಬಳಿ ಮರಳು ತುಂಬಿ ಸಾಗಣೆ ಮಾಡುತ್ತಿದ್ದ ಸ್ವರಾಜ್ ಮಜ್ಡಾ ಲಾರಿ ಮತ್ತು ₹21,560 ಬೆಲೆಯ 7 ಟನ್ ಮರಳು ಜಪ್ತಿ ಮಾಡಿದ್ದಾರೆ. ಚಾಲಕ ಕುಂಚೂರು ಹನುಮಂತ ಹಾಗೂ ಲಾರಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿಗಳಾದ ಕೀರ್ತಿಕುಮಾರ್, ಕಿರಣ್, ಮಲ್ಲಯ್ಯ, ಹಿರೇಹಡಗಲಿ ಠಾಣೆಯ ಎಎಸ್ಐ ಕೆ.ಸಿದ್ದಪ್ಪ, ಪ್ರಶಾಂತ, ಗೋಣಿಬಸಪ್ಪ, ಶ್ರೀಶೈಲ ದಾಳಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.