ADVERTISEMENT

ಹೂವಿನಹಡಗಲಿ| ಮರಳು ಅಕ್ರಮ ಸಾಗಣೆ: ಎರಡು ತೆಪ್ಪ ವಶ

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 13:33 IST
Last Updated 9 ಜೂನ್ 2023, 13:33 IST
ಹೂವಿನಹಡಗಲಿ ತಾಲ್ಲೂಕು ಬ್ಯಾಲಹುಣ್ಸಿ ಬಳಿ ಪೊಲೀಸರು ದಾಳಿ ನಡೆಸಿ ಮರಳು ಸಾಗಣೆಗೆ ಬಳಸುತ್ತಿದ್ದ ತೆಪ್ಪಗಳನ್ನು ವಶಪಡಿಸಿಕೊಂಡಿದ್ದಾರೆ
ಹೂವಿನಹಡಗಲಿ ತಾಲ್ಲೂಕು ಬ್ಯಾಲಹುಣ್ಸಿ ಬಳಿ ಪೊಲೀಸರು ದಾಳಿ ನಡೆಸಿ ಮರಳು ಸಾಗಣೆಗೆ ಬಳಸುತ್ತಿದ್ದ ತೆಪ್ಪಗಳನ್ನು ವಶಪಡಿಸಿಕೊಂಡಿದ್ದಾರೆ   

ಹೂವಿನಹಡಗಲಿ: ತಾಲ್ಲೂಕಿನ ಬ್ಯಾಲಹುಣ್ಸಿ ಬಳಿ ತುಂಗಭದ್ರಾ ನದಿ ತೀರದಲ್ಲಿ ಮರಳು ಅಕ್ರಮ ಸಾಗಣೆಯಲ್ಲಿ ತೊಡಗಿದ್ದವರ ಮೇಲೆ ಹಿರೇಹಡಗಲಿ ಪೊಲೀಸರು ಗುರುವಾರ ದಾಳಿ ನಡೆಸಿ ಮರಳು ಸಾಗಣೆಗೆ ಬಳಸುತ್ತಿದ್ದ ಎರಡು ತೆಪ್ಪಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಲ ದಿನಗಳಲ್ಲಿ ನದಿಯ ಆಳದಿಂದ ಮರಳನ್ನು ತೆಗೆದು ತೆಪ್ಪಗಳಲ್ಲಿ ತುಂಬಿ ಅಕ್ರಮವಾಗಿ ಸಾಗಿಸಲಾಗುತಿತ್ತು. ಖಚಿತ ಮಾಹಿತಿ ಮೇರೆಗೆ ಹಿರೇಹಡಗಲಿ ಪೊಲೀಸರು ದಾಳಿ ನಡೆಸುತ್ತಿದ್ದಂತೆ ದಂಧೆಕೋರರು ತೆಪ್ಪಗಳನ್ನು ನದಿ ತೀರದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಅಂದಾಜು ₹ 20 ಸಾವಿರ ಬೆಲೆಯ ಎರಡು ಕಬ್ಬಿಣದ ತೆಪ್ಪಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.