ADVERTISEMENT

ಭೂ ದಾಖಲೆಗಳ ಇ–ಖಜಾನೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2025, 14:01 IST
Last Updated 9 ಜನವರಿ 2025, 14:01 IST
ಕಂದಾಯ ಇಲಾಖೆಯ ವತಿಯಿಂದ ಭೂ ಸುರಕ್ಷಾ ಕಾರ್ಯಕ್ರಮದ ಅಡಿ ಆರಂಭಿಸಿರುವ ನೂತನ ಭೂ ದಾಖಲೆಗಳ ಇ– ಖಜಾನೆಯ ದಾಖಲೀಕರಣ ಪ್ರಕ್ರಿಯೆಗೆ ಶಾಸಕ ನಾರಾ ಭರತ್ ರೆಡ್ಡಿ ಗುರುವಾರ ಚಾಲನೆ ನೀಡಿದರು
ಕಂದಾಯ ಇಲಾಖೆಯ ವತಿಯಿಂದ ಭೂ ಸುರಕ್ಷಾ ಕಾರ್ಯಕ್ರಮದ ಅಡಿ ಆರಂಭಿಸಿರುವ ನೂತನ ಭೂ ದಾಖಲೆಗಳ ಇ– ಖಜಾನೆಯ ದಾಖಲೀಕರಣ ಪ್ರಕ್ರಿಯೆಗೆ ಶಾಸಕ ನಾರಾ ಭರತ್ ರೆಡ್ಡಿ ಗುರುವಾರ ಚಾಲನೆ ನೀಡಿದರು   

ಬಳ್ಳಾರಿ: ಕಂದಾಯ ಇಲಾಖೆಯ ವತಿಯಿಂದ ಭೂ ಸುರಕ್ಷಾ ಕಾರ್ಯಕ್ರಮದ ಅಡಿ ಆರಂಭಿಸಿರುವ ನೂತನ ಭೂ ದಾಖಲೆಗಳ ಇ– ಖಜಾನೆಯನ್ನು ಶಾಸಕ ನಾರಾ ಭರತ್ ರೆಡ್ಡಿ ಗುರುವಾರ ಉದ್ಘಾಟಿಸಿದರು.

ಅನಂತಪುರ ರಸ್ತೆಯಲ್ಲಿರುವ ನೂತನ ಜಿಲ್ಲಾಡಳಿತ ಭವನದಲ್ಲಿ ಏರ್ಪಡಿಸಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಳ್ಳಾರಿ ತಹಶೀಲ್ದಾರ್ ಗುರುರಾಜ ಶಾಸಕ ನಾರಾ ಭರತ್ ರೆಡ್ಡಿಯವರಿಗೆ ಭೂ ಸುರಕ್ಷಾ ಕಾರ್ಯಕ್ರಮದ ಮಾಹಿತಿ ನೀಡಿದರು.

ತಾಲ್ಲೂಕು ಕಚೇರಿ, ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲ ಭೂ ದಾಖಲೆಗಳ ಡಿಜಟಲೀಕರಣ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಕಾರ್ಯಕ್ರಮ ಆರಂಭಿಸಿದೆ. ಹಳೆಯ, ದುಸ್ಥಿತಿಯಲ್ಲಿರುವ ಭೂ ದಾಖಲೆಗಳನ್ನು ಶಾಶ್ವತ ಡಿಜಿ ದಾಖಲೆಗಳಾಗಿ ಪರಿವರ್ತಿಸುವುದು, ರೆಕಾರ್ಡ್ ರೂಂಗಳಿಂದ ದಾಖಲೆ ಪಡೆದುಕೊಳ್ಳಲು ಇರುವ ತೊಂದರೆಗಳ ನಿವಾರಣೆ, ಹಳೆಯ ದಾಖಲೆಗಳ ಸಂರಕ್ಷಣೆ ಹಾಗೂ ಕಳವು- ತಿದ್ದುಪಡಿ ನಿಯಂತ್ರಣ ಮಾಡುವುದು ಸೇರಿದಂತೆ ಹಲವು ಪ್ರಯೋಜನಗಳನ್ನು ಇನ್ನು ಮುಂದೆ ಸಾರ್ವಜನಿಕರು ಪಡೆಯಬಹುದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.