ADVERTISEMENT

ಪಿಟ್‌ ಎನ್‌ಡಿಪಿಎಸ್‌ ಕಾಯ್ದೆ ಪ್ರಯೋಗಿಸಿದ ಐಜಿಪಿ; ಡ್ರಗ್ಸ್‌ ಪೆಡ್ಲರ್‌ ಜೈಲಿಗೆ

ಪಿಟ್‌ ಎನ್‌ಡಿಪಿಎಸ್‌ ಕಾಯ್ದೆ ಪ್ರಯೋಗಿಸಿದ ವಲಯ ಐಜಿಪಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 0:14 IST
Last Updated 14 ಫೆಬ್ರುವರಿ 2026, 0:14 IST
ಮೆಹಬೂಬ್‌ ದೌಲ
ಮೆಹಬೂಬ್‌ ದೌಲ   

ಬಳ್ಳಾರಿ: ‘ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ ಅಕ್ರಮ ಸಾಗಣೆ ತಡೆಗಟ್ಟುವಿಕೆ ಕಾಯ್ದೆ, 1988 (ಪಿಟ್‌ ಎನ್‌ಡಿಪಿಎಸ್‌) ಕಾಯ್ದೆ ಪ್ರಯೋಗಿಸಿ ಅಂತರರಾಜ್ಯ ಡ್ರಗ್‌ ಪೆಡ್ಲರ್‌ ಮೆಹಬೂಬ್‌ ದೌಲ ಎಂಬಾತನನ್ನು ಬಳ್ಳಾರಿ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. 

ಬಳ್ಳಾರಿಯ ರಾಣಿ ತೋಟ ನಿವಾಸಿಯಾಗಿದ್ದ ದೌಲ 15 ವರ್ಷಗಳಿಂದ ಡ್ರಗ್ಸ್‌ ದಂಧೆ ನಡೆಸುತ್ತಿದ್ದು, ಬಳ್ಳಾರಿ, ಮೈಸೂರು, ಚಿತ್ರದುರ್ಗ ಸೇರಿ ರಾಜ್ಯದ ಹಲವು ಠಾಣೆಗಳಲ್ಲಿ 21 ಪ್ರಕರಣಗಳಿತ್ತು. ತಲೆಮರೆಸಿಕೊಂಡಿದ್ದ ದೌಲ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯು ಐಜಿಪಿಗೆ ದಾಖಲೆ ಸಲ್ಲಿಸಿದ್ದರು. 

ಕಲ್ಯಾಣ ಕರ್ನಾಟಕ ಭಾಗದಲ್ಲಿ ಡ್ರಗ್ಸ್‌ ದಂಧೆಯಲ್ಲಿ ದೌಲನ ಪಾತ್ರ ಗಮನಿಸಿದ ವಲಯ ಐಜಿಪಿ ಡಾ. ಪಿಎಸ್‌ ಹರ್ಷ ‘ಪಿಟ್ ಎನ್‌ಡಿಪಿಎಸ್‌’ನ ಸೆಕ್ಷ್‌ 3 ಅಡಿಯಲ್ಲಿ ತಮಗಿರುವ ಅಧಿಕಾರ ಬಳಸಿ ದೌಲ ಬಂಧನಕ್ಕೆ ಆದೇಶ ಹೊರಡಿಸಿದ್ದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಇದೇ ಮೊದಲ ಬಾರಿಗೆ ‘ಪಿಟ್‌ ಎನ್‌ಡಿಪಿಎಸ್‌’ ಕಾಯ್ದೆ  ಪ್ರಯೋಗವಾಗಿದೆ ಎಂದು ವಿಭಾಗೀಯ ಹಿರಿಯ ಕಾನೂನು ಅಧಿಕಾರಿ ಬಿ.ಎಸ್‌ ಪಾಟೀಲ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.