
ಪ್ರಜಾವಾಣಿ ವಾರ್ತೆ
ಕಂಪ್ಲಿ: ಇಲ್ಲಿನ ಹೊಸಪೇಟೆ ಬೈಪಾಸ್ ರಸ್ತೆಯ ಖಾಸಗಿ ಬಡಾವಣೆಯೊಂದರಲ್ಲಿ ಒಳಚರಂಡಿಗಾಗಿ ಗುಂಡಿ ತೋಡುವಾಗ ಎದುರಾದ ಕಲ್ಲುಬಂಡೆಗಳ ತೆರವಿಗೆ ಸ್ಪೋಟಕ ಬಳಸಿ ಸಿಡಿಸಿದ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯ ಪೋಲಿಸರು ಸ್ವಯಂ ಪ್ರೇರಿತ(ಸುಮೋಟೊ) ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಲಬುರಗಿಯ ಬಾಂಬ್ ನಿಷ್ಕ್ರೀಯ ತಂಡ, ಬಳ್ಳಾರಿಯ ಅಪರಾಧ ಪರಿಶೀಲನಾ ತಂಡ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಿವೇಶನ ಮಾಲೀಕ ಮತ್ತು ಕೆಲಸಗಾರರ ವಿರುದ್ಧ ಪ್ರಕರಣ ದಾಖಲಾಗಿದೆ. ಸ್ಫೋಟಕ ಬಳಸಿದ್ದರಿಂದ ಸುತ್ತಲಿನ ಜನವಸತಿ ಪ್ರದೇಶದಲ್ಲಿ ಆತಂಕ ಮೂಡಿಸಿತ್ತು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.