
ಕಂಪ್ಲಿ: ‘ಪವಿತ್ರ ರಂಜಾನ್ ಮಾಸದಲ್ಲಿ ಸೌಹಾರ್ದ ಇಫ್ತಾರ್ ಕೂಟ ಆಯೋಜಿಸಿರುವುದು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ’ ಎಂದು ಇಳಕಲ್‍ನ ಚಿಂತಕ ಲಾಲ್‍ಹುಸೇನ್ ಸಾಬ್ ಕಂದಗಲ್ ಮೆಚ್ಚುಗೆ ವ್ಯಕ್ತಪಡಿಸಿದರು.
ಇಲ್ಲಿನ ಬಿಎಸ್‍ವೈ ಗಾರ್ಡನ್‍ನಲ್ಲಿ ಜಮಾತೇ ಇಸ್ಲಾಮೀ ಹಿಂದ್ ಆಶ್ರಯದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಸೌಹಾರ್ದತೆಯ ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ವಧರ್ಮಿಯರು ಒಂದೇ ಎಂದು ಭಾವಿಸಿ ಬದುಕಬೇಕು ಎಂದರು.
ಸೈಯ್ಯದ್ ಷಾಹ್ ಅಬ್ದುಲ್ ವಾಹೀದ್ ಖಾದ್ರಿ ಸಾಹೇಬ್, ಮುಸ್ಲಿಮ್ ಗುರುಗಳಾದ ಸೈಯ್ಯದ್ ಷಾಹ್ ಕರಿಮುಲ್ಲಾಖಾದ್ರಿ, ಸೈಯ್ಯದ್ ಷಾಹ್ ಅಬ್ದುಲ್ ವಾಹೀದ್‍ಖಾದ್ರಿ ಸಾಹೇಬ್, ಎಚ್.ವೀರಾಪುರದ ಜ್ಞಾನಜ್ಯೋತಿ ಶಿವಮಂದಿರದ ಜಡೇಶತಾತ ಸಾನ್ನಿಧ್ಯವಹಿಸಿದ್ದರು.
ಜಮಾಅತೆ ಇಸ್ಲಾಮೀ ಹಿಂದ್ ಸಂಚಾಲಕ ವಾಸೀಮ್ ಫಯಾಜ್ ಅಧ್ಯಕ್ಷತೆ ವಹಿಸಿದ್ದರು. ಜಮಾಅತೆ ಜಿಲ್ಲಾ ಸಂಚಾಲಕ ಸೈಯ್ಯದ್ ಜೈನುಲ್ಲಾ ಅಬುದಿನ್‍ಖಾದ್ರಿ, ಜಿಲ್ಲಾ ಉಪಾಧ್ಯಕ್ಷೆ ನೂರ್ ಜಹಾಸಾಹೀಬಾ, ವಲಯ ಅಧ್ಯಕ್ಷ ಅನ್ವರ್ ಬಾಷ ಉಮ್ರಿ, ಪ್ರಮುಖರಾದ ಎನ್. ಹಬೀಬ್ ರೆಹಮಾನ್, ಕೆ.ಎಸ್. ಚಾಂದ್‍ಭಾಷ, ನೌಷಾದ್‍ಅಹ್ಮದ್ ಹಾಫೀಜ್, ಅತಾವುಲ್ಲಾ ರೆಹಮಾನ್, ಕೆ. ಮಸ್ತಾನ್, ಎಸ್.ಕೆ. ಇಂತಿಯಾಜ್, ಅಹ್ಮದ್, ಖಲಂದರ್, ಸಾಧಿಕ್, ಪಾಸ್ಟರ್ ಪಾಲ್ ಪಂಪಾಪತಿ, ಜೈನ್‍ಧರ್ಮದ ಪ್ರಮುಖರಾದ ಶಾಂತಿಲಾಲ್ ಸಿಂಘ್ವಿ, ಶಾಂತಿಲಾಲ್ ಬಾಲಾರ್, ಪ್ರಮುಖರಾದ ಕೆ.ಎಂ. ಹೇಮಯ್ಯಸ್ವಾಮಿ, ಪಿ.ನಾಗೇಶ್ವರರಾವ್, ಷಣ್ಮುಖಪ್ಪ ಚಿತ್ರಗಾರ, ನೀರಗಂಟಿ ವೀರೇಶ್, ಎಲ್.ರಾಘವೇಂದ್ರ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.