ಕಂಪ್ಲಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಜನರಲ್ಲಿ ಕಾಣಿಸಿಕೊಂಡಿರುವ ಕಣ್ಣಿನ ಉರಿಊತ (ಮದ್ರಾಸ್ ಐ) ಸೋಂಕಿಗೆ ಸ್ಥಳೀಯ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಿದೆ.
ಸೋಂಕಿನಿಂದ ಬಳಲುವವರು ಆಸ್ಪತ್ರೆ ಅವಧಿಯಲ್ಲಿ ಭೇಟಿ ನೀಡಿದರೆ, ತಪಾಸಣೆ ನಡೆಸಿ ತ್ರಿಫಲಚೂರ್ಣ ಕಷಾಯ ನೀಡಲಾಗುವುದು. ಇದರಿಂದ ಕಣ್ಣು ಶುಚಿಗೊಳಿಸಿದರೆ ನೋವು ನಿವಾರಣೆಯಾಗುತ್ತದೆ ಎಂದು ಚಿಕಿತ್ಸಾಲಯದ ವೈದ್ಯಾಧಿಕಾರಿ ಜಗನ್ನಾಥ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.